ಬೆಂಗಳೂರು-ಕಾರವಾರ ಮಧ್ಯೆ ವಿಶೇಷ ರೈಲು
ಉಡುಪಿ, ಅ.5: ಜನದಟ್ಟಣೆಯ ಹಿನ್ನೆಲೆಯಲ್ಲಿ ಸೌತ್ ವೆಸ್ಟರ್ನ್ ರೈಲ್ವೆಯ ಸಹಯೋಗದೊಂದಿಗೆ ಬೆಂಗಳೂರು-ಕಾರವಾರ- ಬೆಂಗಳೂರು ಮಧ್ಯೆ ಜೋಲಾರಪೇಟೆ, ಸೇಲಂ, ಈರೋಡ್, ಪಾಲ್ಗಾಟ್, ಶೋರ್‌ನೂರ್ ಮಾರ್ಗದಲ್ಲಿ ವಿಶೇಷ ರೈಲಿನ ತಲಾ ಎರಡು ಟ್ರಿಪ್‌ನ್ನು ಅ.8ರವರೆಗೆ ಓಡಿಸಲು ನಿರ್ಧರಿಸಲಾಗಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆಯೊಂದು ತಿಳಿಸಿದೆ.
ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್‌ನಿಂದ ಅ.5ರ ಶುಕ್ರವಾರ ಹಾಗೂ ಅ.7 ರವಿವಾರ ಸಂಜೆ 6:50ಕ್ಕೆ ಹೊರಡುವ ರೈಲು ನಂ.06523 ಮರು ದಿನ ಸಂಜೆ 5:30ಕ್ಕೆ ಕಾರವಾರ ತಲುಪುವುದು. ಅದೇ ರೀತಿ ಅ.6 ಶನಿವಾರ ಹಾಗೂ ಅ.8 ಸೋಮವಾರ ಕಾರವಾರದಿಂದ ಸಂಜೆ 6:05ಕ್ಕೆ ಹೊರಡುವ ರೈಲು ನಂ. 06524 ಮರುದಿನ ಸಂಜೆ 4:05ಕ್ಕೆ ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್ ತಲುಪುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಾಮಾನ್ಯ ದರದಲ್ಲೇ ಓಡುವ ಈ ರೈಲಿನಲ್ಲಿ ಒಂದು ಎಸಿ ಕೋಚ್, ಒಂದು 2ಟಯರ್ ಸಿಸಿ ಹಾಗೂ 3ಟಯರ್ ಎಸಿ ಕಾಂಪೋಸಿಟ್ ಕೋಚ್, ಒಂದು 3ಟಯರ್, 13 ಸ್ಲೀಪರ್ ಕೋಚ್ ಹಾಗೂ ಮೂರು ಜನರಲ್ ಕೋಚ್‌ಗಳಿರುತ್ತವೆ ಎಂದೂ ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.