×
Ad

ಕೇಂದ್ರ ಸರಕಾರದ ಯುನಿವರ್ಸಿಟಿ ಅನುದಾನ ಆಯೋಗದದಿಂದ ಸಹ್ಯಾದ್ರಿ ಕಾಲೇಜಿಗೆ 'ಬಿ' ಗ್ರೇಡ್

Update: 2018-10-05 20:31 IST

ಮಂಗಳೂರು, ಅ.5: ಕೇಂದ್ರ ಸರಕಾರದ ಅಪೆಕ್ಸೃ್ ಮಂಡಳಿಯಿಂದ ಗುರುತಿಸಲ್ಪಟ್ಟಿರುವ ರಾಜ್ಯದ ಕೆಲವೇ ಕಾಲೇಜುಗಳಲ್ಲಿ ಒಂದಾದ ಅಡ್ಯಾರ್‌ನ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗೆ ಕೇಂದ್ರ ಸರಕಾರದ ಯುನಿವರ್ಸಿಟಿ ಅನುದಾನ ಆಯೋಗದದಿಂದ 12 (ಬಿ) ಗ್ರೇಡ್ ಮಾನ್ಯತೆ ಲಭಿಸಿದೆ.

ಆ ಮೂಲಕ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಡೆಸುವ ಪ್ರಾಯೋಜಿತ ಯೋಜನೆಗಳಿಗೆ ಅನುದಾನ ರೂಪದಲ್ಲಿ ಕೇಂದ್ರ ಸರ್ಕಾರದ ನೆರವು ಪಡೆಯುವ ಅರ್ಹತೆ ಹೊಂದಿದೆ. ಸಹ್ಯಾದ್ರಿ ಇನ್‌ಸ್ಟಿಟ್ಯೂಟ್ ಕಾರ್ಯಕ್ರಮಗಳೊಂದಿಗೆ ನಡೆಸುವ ಮಾನವ ಸಂಪನ್ಮೂಲ ಅಭಿವೃದ್ಧಿಗೆ ನೆರವು ನೀಡಲಾಗುವುದು. ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ ಈಗ ಯುಜಿಸಿ ಕಾಯ್ದೆ 1956ರ ಸೆಕ್ಷನ್ 12(ಬಿ)ಅಡಿಯಲ್ಲಿ ರಚಿಸಲಾದ ನಿಯಮಗಳ ಆಧಾರದಲ್ಲಿ ಕೇಂದ್ರ ನೆರವು ಪಡೆಯಲು ಅರ್ಹವಾಗಿದೆ ಎಂದು ಘೋಷಿಸಲ್ಪಟ್ಟಿದೆ.

ತಾಂತ್ರಿಕ ಶಿಕ್ಷಣ ಮತ್ತು ಶೈಕ್ಷಣಿಕ ಯೋಜನೆಗಳಿಗೆ ಸಂಬಂಧಿಸಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದೀಗ ಎಐಸಿಟಿಇ, ವಿಜಿಎಸ್‌ಟಿ, ಡಿಎಸ್‌ಟಿ ಕರ್ನಾಟಕ ಸರಕಾರದ ನೆರವಿನೊಂದಿಗೆ ಯುಜಿಸಿ ಯ ಬೆಂಬಲವನ್ನು ಕೂಡಾ ಪಡೆಯಬಹುದಾಗಿದೆ. ಯುನಿವರ್ಸಿಟಿ ಅನುದಾನದ ಈ ಮನ್ನಣೆಯು ಸಹ್ಯಾದ್ರಿ ಕಾಲೇಜಿನಲ್ಲಿ ಇರುವ ಮೂಲಭೂತ ಸೌಕರ್ಯ, ಶೈಕ್ಷಣಿಕ ಸೌಲಭ್ಯಗಳನ್ನು ಮತ್ತು ವಿದ್ಯಾರ್ಥಿಗಳಿಗೆ ನೀಡಲಾಗುವ ಉನ್ನತ ಶಿಕ್ಷಣವನ್ನು ಆಧರಿಸಿ ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News