ತೆಂಗಿನ ಮರದಿಂದ ಬಿದ್ದ ಗಾಯಾಳು ಮೃತ್ಯು
Update: 2018-10-05 22:16 IST
ಹೆಬ್ರಿ, ಅ.5: ಚಾರಾ ಗ್ರಾಮದ ನಡುಮನೆ ಎಂಬಲ್ಲಿ ತೆಂಗಿನಮರದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಚಾರ ನಡುಮನೆ ನಿವಾಸಿ ತಿಮ್ಮಪ್ಪ (50) ಎಂದು ಗುರುತಿಸಲಾಗಿದೆ.
ಇವರು ಸೆ.18ರಂದು ಸಂಜೆ ಮನೆಯ ತೆಂಗಿನ ಮರಕ್ಕೆ ಹತ್ತಿ ತೆಂಗಿನ ಕಾಯಿ ತೆಗೆಯುತ್ತಿರುವಾಗ ಅಕಸ್ಮಿಕವಾಗಿ ಕೆಳಕ್ಕೆ ಬಿದ್ದರೆನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಇವರು ಅ.4ರಂದು ಸಂಜೆ 7.40ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.