×
Ad

ಮಂಗಳೂರು: ಸುಂಟರಗಾಳಿಯಿಂದ ಪ್ಲೈವುಡ್ ಕಾರ್ಖಾನೆಗೆ ಲಕ್ಷಾಂತರ ರೂ. ಹಾನಿ

Update: 2018-10-05 22:34 IST

ಮಂಗಳೂರು, ಅ. 5: ಸಮೀಪದ ಕಂಬ್ಲಪದವಿನಲ್ಲಿ ಬೀಸಿದ ಸುಂಟರ ಗಾಳಿಗೆ ಕಾರ್ಖಾನೆಯ ಹೊಗೆ ಕೊಳವೆಯಲ್ಲಿ ಸಿಲುಕಿ ಲಕ್ಷಾಂತರ ರೂ. ಹಾನಿಯಾದ ಘಟನೆ ನಗರದ ಫಳ್ನೀರ್‌ನಲ್ಲಿ ಗುರುವಾರ ಸಂಜೆ ನಡೆದಿದೆ.

ನಗರದ ಫಳ್ನೀರ್ ನಿವಾಸಿ ಎಂ. ಅಹ್ಮದ್ ಎಂಬವರಿಗೆ ಸೇರಿದ ಎ.ಕೆ. ಬೋರ್ಡ್ಸ್ ಆ್ಯಂಡ್ ಡೋರ್ಸ್‌ ಪ್ಲೈವುಡ್ ಕಾರ್ಖಾನೆಗೆ ಹಾನಿಯಾಗಿದ್ದು, ಸುಮಾರು 80 ಅಡಿ ಎತ್ತರದ ಕೊಳವೆಯು ಕಾರ್ಖಾನೆಯ ಮಾಡಿನ ಮೇಲೆ ಬಿದ್ದು, ಮಾಡಿನ ಸಿಮೆಂಟ್‌ ಸೀಟು ಸಂಪೂರ್ಣ ಹಾನಿಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಳೆ ನೀರು ಕಾರ್ಖಾನೆ ಒಳಗೆ ನುಗ್ಗಿ, ಯಂತ್ರೋಪಕರಣಗಳು, ಕಚ್ಚಾ ವಸ್ತು ಹಾಗೂ ಪ್ಲೈವುಡ್ ಸೇರಿದಂತೆ ಸುಮಾರು 12 ಲಕ್ಷ ಕ್ಕೂ ಹೆಚ್ಚು ಮೌಲ್ಯದ ಸೊತ್ತಿಗೆ ಹಾನಿಯಾಗಿದೆ. ಎಂ.ಅಹ್ಮದ್ ಅವರು ಇನ್‌ ನ್ಸೂರೆನ್ಸ್ ಕಂಪೆನಿ ಹಾಗೂ ಫಜೀರು ಗ್ರಾಪಂ ಪಿಡಿಒಗೆ ಹಾನಿಯಾದ ಬಗ್ಗೆ ವರದಿ ಸಲ್ಲಿಸಿದ್ದಾರೆ.

ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News