ಸೋಮೇಶ್ವರ: ಸಮುದ್ರಕ್ಕೆ ಹಾರಿ ಯುವಕ ಆತ್ಮಹತ್ಯೆ
Update: 2018-10-05 22:55 IST
ಉಳ್ಳಾಲ, ಅ. 5: ಮಾನಸಿಕ ಖಿನ್ನತೆಗೊಳಗಾಗಿದ್ದ ಯುವಕನೊಬ್ಬ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದ್ದು ಮೃತ ದೇಹ ಸಂಜೆ ವೇಳೆ ಸೋಮೇಶ್ವರ ಸಮುದ್ರ ಕಿನಾರೆಯ ರುದ್ರಪಾದೆಯ ಬಳಿ ಪತ್ತೆಯಾಗಿದೆ.
ಮೃತನನ್ನು ತೊಕ್ಕೊಟ್ಟು ಮೇಲ್ಸೇತುವೆ ನಿವಾಸಿ ರಾಜೇಶ್ ಎಂದು ಗುರುತಿಸಲಾಗಿದೆ. ಅವರು ಕಳೆದ ಕೆಲವು ಸಮಯದಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ ಎನ್ನಲಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.