ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ: ನೂತನ ಪದಾಧಿಕಾರಿಗಳ ಆಯ್ಕೆ
ಕಾರ್ಕಳ, ಅ. 5: ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಗಣೇಶ್ ಪಾಂಡೇಲು ಅಧ್ಯಕ್ಷತೆಯಲ್ಲಿ ನಗರದ ಹೋಟೆಲ್ ಪ್ರಕಾಶ್ ನ ಸಬಾಂಗಣದಲ್ಲಿ ಜರುಗಿತು.
2018-19 ನೇ ಸಾಲಿನ ನೂತನ ಅಧ್ಯಕ್ಷರಾಗಿ ಅರ್. ಬಿ ಜಗದೀಶ್, ಪ್ರಧಾನ ಕಾರ್ಯದರ್ಶಿಯಾಗಿ ಬಿ. ಸಂಪತ್ ನಾಯಕ್ ಅವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆ ಮಾಡಿದೆ.
ಕೋಶಾಧಿಕಾರಿಯಾಗಿ ವಿಲಾಸ್ ಕುಮಾರ್ ನಿಟ್ಟೆ, ಉಪಾಧ್ಯಕ್ಷರಾಗಿ ಪ್ರಸನ್ನ ಸಚ್ಚರಿಪೇಟೆ, ಜೊತೆ ಕಾರ್ಯದರ್ಶಿಯಾಗಿ ಹರಿಪ್ರಸಾದ್ ನಂದಳಿಕೆ, ಕಾರ್ಯ ಕಾರಿ ಸಮಿತಿ ಸದಸ್ಯರಾಗಿ ರಾಧಾಕೃಷ್ಣ ತೋಡಿಕಾನ, ಕೃಷ್ಣ ಎಂ ಅಜೆಕಾರು, ಪುಂಡಲೀಕ ಎಸ್.ವಾಸುದೇವ ಭಟ್, ಗಣೇಶ್ ನಾಯಕ್, ಜಗದೀಶ್ ಅಂಡಾರು ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಸರಳ ಬೆಟ್ಟು, ಉಪಾಧ್ಯಕ್ಷ ಮಹಮ್ಮದ್ ಶರೀಫ್, ಜಿಲ್ಲಾ ಸಂಘದ ಸದಸ್ಯರುಗಳಾದ ಪುಂಡಲೀಕ ಮರಾಠೆ, ಕೆ.ಎಂ.ಖಲೀಲ್ ಉಪಸ್ಥಿತರಿದ್ದರು.