×
Ad

ಕಾರ್ಕಳದಲ್ಲಿರುವ ಕಾಂಗ್ರೆಸ್ ಯಾವುದು : ನೇಮಿರಾಜ ರೈ ಪ್ರಶ್ನೆ

Update: 2018-10-05 23:08 IST

ಕಾರ್ಕಳ, ಅ. 5: ಕಾರ್ಕಳದಲ್ಲಿರುವ ಕಾಂಗ್ರೆಸ್ ರಾಷ್ಟ್ರೀಯ ಕಾಂಗ್ರೆಸ್..? ಇಲ್ಲ ಖಾಸಾಗಿ ಕಾಂಗ್ರೆಸ್ ಎಂಬುದು ಮೊದಲು ಕಾರ್ಕಳ ಬ್ಲಾಕ್ ಅಧ್ಯಕ್ಷರು ಸ್ಪಷ್ಟಪಡಿಸಲಿ ನಂತರ ಉಚ್ಚಾಟನೆ ಪ್ರಕಿಯೆ ಮುಂದುವರೆಸಲಿ ಎಂದು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ನೇಮಿರಾಜ ರೈ ಹೇಳಿದ್ದಾರೆ.

ಅವರು ಶುಕ್ರವಾರ  ಹೊಟೇಲ್ ಪ್ರಕಾಶ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಷ್ಟ್ರೀಯ ಕಾಂಗ್ರೆಸ್‍ಗೆ ತನ್ನದೇ ಆದ ನೀತಿ ನಿಯಮಗಳಿದ್ದು ಅದರದ್ದೇ ಅದ ಸಂವಿಧಾನವಿದೆ. ನಾನು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯನಾಗಿದ್ದು ಆ ಪಕ್ಷದಿಂದ ಅಧಿಕೃತವಾಗಿ ನನ್ನನ್ನು ಉಚ್ಚಾಟಿಸಿಲ್ಲ, ಕಾರ್ಕಳದಲ್ಲಿರುವ ಅನಧಿಕೃತ ಕಾಂಗ್ರೆಸ್ ಸಮಿತಿ ನನ್ನನ್ನು ಪಕ್ಷದಿಂದ ಉಚ್ಚಾಟಿಸಿರುವುದಾಗಿ ಪತ್ರಿಕಾ ಮಾಧ್ಯಮಗಳಲ್ಲಿ ಹೇಳಿಕೆ ನೀಡಲಾಗಿದ್ದು ಈ ಕುರಿತು ನನಗೆ ಈವರೆಗೆ ಉಚ್ಚಾಟನೆ ಸಂಬಂಧಿಸಿದಂತೆ ನೋಟೀಸ್ ಆಗಲಿ, ವಿವರಣೆಯಾಗಲಿ ದೊರೆತಿಲ್ಲ. ನಾನು ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದೇನೆ ಎಂದು ನನ್ನ ವಿರುದ್ಧ ವೈಯುಕ್ತಿಕ ದ್ವೇಷವನ್ನು ಸಾರುವ ಮೂಲಕ ಇಂತಹ ಬೇಜಾವ್ದಾರಿ ಹೇಳಿಕೆ ನೀಡಿಲಾಗಿದೆ. ಪಕ್ಷ ವಿರೋಧ ಮಾಡಿದ್ದಲ್ಲಿ ಪಕ್ಷದಿಂದ ಯಾವುದೇ ಕಾರ್ಯಕರ್ತನನ್ನು ಉಚ್ಚಟಿಸ ಬೇಕಾದರೆ ಪಕ್ಷಕ್ಕೆ ಅದರದ್ದೇ ಆದ ನಿಯಮ ಹಾಗೂ ಬದ್ದತೆಗಳಿವೆ ಏಕಾ ಏಕಿ ಅಧ್ಯಕ್ಷರು ಇಂತಹ ನಿರ್ಧಾರ ತೆಗೆದುಕೊಳ್ಳಲು ಸಾದ್ಯವಿಲ್ಲ ಎಂದು ಹೇಳಿದ್ದಾರೆ. 

ಪ್ರತಿ ಬಾರಿ  ನನಗೆ  ನೋಟೀಸ್ ಕೂಡಾ ನೀಡಿ ಎಚ್ಚರಿಸಿದ್ದೇನೆ ಎಂದಿರುವುದು ಕೂಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬೇಜಾವ್ದಾರಿ ಹೇಳಿಕೆಯಾಗಿದೆ. ಒಂದು ವೇಳೆ ಈ ಬಗ್ಗೆ ಅವರಲ್ಲಿ ಸೂಕ್ತ ದಾಖಲೆಗಳಿದ್ದರೆ ಮುಂದಿನ ಹದಿನೈದು ದಿನಗಳೊಳಗಾಗಿ ಬಿಡುಗಡೆಗೊಳಿಸಬೇಕು ಎಂದರು. 
ಹೈಮಾಂಡ್ ಆದೇಶದ ಮೆರೆಗೆ ಉಚ್ಚಾಟನೆ ನಡೆಸಲಾಗಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ. ಹೈಕಮಾಂಡ್ ಯಾರು..? ಅನ್ನುವುದನ್ನು ಮೊದಲು ಸ್ಪಷ್ಟ ಪಡಿಸಲಿ ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News