ಕೊಂಕಣ ರೈಲ್ವೆ: 2 ರೈಲುಗಳಲ್ಲಿ ಬೋಗಿಗಳ ಹೆಚ್ಚಳ
Update: 2018-10-06 18:09 IST
ಉಡುಪಿ, ಅ.6: ನವರಾತ್ರಿ ಪೂಜಾ, ದೀಪಾವಳಿ ಹಾಗೂ ಛಾಟ್ ಉತ್ಸವದ ಪ್ರಯುಕ್ತ ಜನದಟ್ಟಣೆಯ ಹಿನ್ನೆಲೆಯಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಎರಡು ರೈಲುಗಳಲ್ಲಿ ತಲಾ ಒಂದು ಹೆಚ್ಚುವರಿ ಎಸಿ 3ಟಯರ್ ಬೋಗಿಯನ್ನು ತಾತ್ಕಾಲಿಕ ನೆಲೆಯಲ್ಲಿ ಓಡಿಸಲು ನಿರ್ಧರಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಿಸ್ಸಾರ್ ಜಂಕ್ಷನ್-ಕೊಯಮತ್ತೂರು-ಹಿಸ್ಸಾರ್ ಜಂಕ್ಷನ್ ನಡುವೆ ಸಂಚರಿಸುವ ರೈಲು ನಂ.22475/22476 ಎಸಿ ಎಕ್ಸ್‌ಪ್ರೆಸ್ ನ.1ರಿಂದ ಡಿ.1 ರವರೆಗಿನ ಅವಧಿಯಲ್ಲಿ ಒಂದು ಹೆಚ್ಚುವರಿ ಬೋಗಿ (ಒಟ್ಟು 17)ಯನ್ನು ಸೇರಿಸಿದರೆ, ಎಚ್.ನಿಜಾಮುದ್ದೀನ್-ಎರ್ನಾಕುಲಂ ಜಂಕ್ಷನ್-ನಿಝಾಮುದ್ದೀನ್ ನಡುವೆ ಸಂಚರಿಸುವ ರೈಲು ನಂ.12284/12283 ದುರಾಂಟೊ ಎಕ್ಸ್‌ಪ್ರೆಸ್ ಗೆ ಅ.13ರಿಂದ ನ.20ರ ನಡುವಿನ ಅವಧಿಯಲ್ಲಿ ಒಂದು ಹೆಚ್ಚುವರಿ ಎಸಿ 3ಟಯರ್ ಬೋಗಿಯನ್ನು ಸೇರಿಸಿ (ಒಟ್ಟು 17) ಓಡಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.