×
Ad

ಹೊಟೇಲ್ಸ್ ಆ್ಯಂಡ್ ರೆಸ್ಟೋರೆಂಟ್ಸ್ ಅಸೋಸಿಯೇಶನ್‌ನಿಂದ ವಿಶೇಷ ಕಾರ್ಯಕ್ರಮ

Update: 2018-10-06 18:42 IST

ಮಂಗಳೂರು, ಅ.6: ದ.ಕ. ಹೊಟೇಲ್ಸ್ ಆ್ಯಂಡ್ ರೆಸ್ಟೋರೆಂಟ್ಸ್ ಅಸೋಸಿಯೇಶನ್ (ರಿ) ಮತ್ತು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ನಗರದ ಪತ್ತುಮುಡಿ ಸೌಧದ ಸಭಾಭವನದಲ್ಲಿ ಇತ್ತೀಚೆಗೆ ‘ಅಂದು-ಇಂದು’ ವಿಶೇಷ ಕಾರ್ಯಕ್ರಮ ಜರುಗಿತು.

ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಕಾರ್ಯಕ್ರಮ ಉದ್ಘಾಟಿಸಿದರು. ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

2017-18ನೇ ಸಾಲಿನಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಅಧಿಕ ಮಾರಾಟ ಮಾಡಿದ ಹೋಟೆಲ್ ಡೀಲರುಗಳಾದ ಜಿನರಾಜ ಶೆಟ್ಟಿ, ಯತಿರಾಜ್ ಶೆಟ್ಟಿ ಕಾವೂರು, ಚಂದ್ರಶೇಖರ್ ಶೆಟ್ಟಿಗಾರ್ ಪಕ್ಷಿಕೆರೆ, ರಾಜೇಶ್ ಪಿ. ಕನ್ಯಾಡಿ ಅವರನ್ನು ಅಭಿನಂದಿಸಲಾಯಿತು. ಅಸೋಸಿಯೇಶನ್‌ನ ರಾಜ್ಯಾಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ಹೊಟೇಲ್ ಉದ್ಯಮಿಗಳಾದ ರಮಾನಂದ ರಾವ್, ಎಂ. ಸುಲೇಮಾನ್, ನಾಗೇಶ್ ರಾವ್ ಅವರನ್ನು ಸನ್ಮಾನಿಸಲಾಯಿತು.

ಅಸೋಸಿಯೇಶನ್‌ನ ಉಪಾಧ್ಯಕ್ಷ ಸ್ವರ್ಣ ಸುಂದರ್, ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ ‘ಅಂದು-ಇಂದು’ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ಅಸೋಸಿಯೇಶನ್‌ನ ಕಾರ್ಯದರ್ಶಿ ದೇವಿಪ್ರಸಾದ್ ರಾವ್ ಕೆ. ಮತ್ತು ವ್ಯವಸ್ಥಾಪಕ ಜಯದೇವಪ್ಪ ‘ಅಂದು-ಇಂದು’ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಹೋಟೆಲ್ಸ್ ಅ್ಯಂಡ್ಸ್ ರೆಸ್ಟೊರೆಂಟ್‌ನ ಅಧ್ಯಕ್ಷ ತಲ್ಲೂರು ಶಿವರಾಮ್ ಶೆಟ್ಟಿ, ಉಪವ್ಯವಸ್ಥಾಪಕ ಲಕ್ಕಪ್ಪ, ಹೊಟೇಲ್ ಉದ್ಯಮಿ ಸೂರ್ಯನಾರಾಯಣ ರಾವ್, ಮತ್ತಿತರರು ಉಪಸ್ಥಿತರಿದ್ದರು. ಅಸೋಸಿಯೇಶನ್‌ನ ಅಧ್ಯಕ್ಷ ಕುಡ್ಪಿಜಗದೀಶ್ ಶೆಣೈ ಸ್ವಾಗತಿಸಿದರು. ಅಧೀಕ್ಷಕ ಎಂ.ರವಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News