×
Ad

ಭಟ್ಕಳ: ಅಂಜುಮನ್ ಮಹಿಳಾ ಮಹಾವಿದ್ಯಾಲಯಕ್ಕೆ ಮೂರು ರ್ಯಾಂಕ್

Update: 2018-10-06 19:52 IST

ಭಟ್ಕಳ, ಅ. 6: ಅಕ್ಕಾಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಧೀನಕ್ಕೊಳಪಟ್ಟಿರುವ ಭಟ್ಕಳದ ಅಂಜುಮನ್ ಮಹಿಳಾ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಕಳೆದ ಜೂನ್ 2018ರಲ್ಲಿ ಜರಗಿದ ಬಿ.ಕಾಮ್ ಅಂತಿಮಾ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗು ಆರನೇ ರ್ಯಾಂಕ್ ಪಡೆದಿದ್ದಾರೆ ಎಂದು ಸಂಸ್ಥೆಯು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ. 

ಫರ್ಹೀನ್ ದಿಲ್ಕಷ್ ಬಿನ್ತೆ ಮುಹಮ್ಮದ್ ಅಮೀನ್ ಮುಲ್ಲಾ 93.39% ಅಂಕ ಗಳಿಸುವುದರ ಮೂಲಕ ಅಕ್ಕಮಹಾದೇವಿ ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಬಂದಿರುತ್ತಾರೆ. ರಾಬಿಯಾ ಬಿನ್ತೆ ಅಬ್ದುಲ್ ರಝಾಖ್ ರುಕ್ನುದ್ದೀನ್ 90.36% ಅಂಕ ಗಳಿಸಿ ಎರಡನೇ ರ್ಯಾಂಕ್ ಹಾಗೂ ಫಾತಿಮಾ ಜೂಹಿ ಬಿನ್ತೆ ಜಾಫರ್ ಸಾದಿಖ್ ಶಾಬಂದ್ರಿ 89.49% ಅಂಕ ಗಳಿಸಿ ವಿಶ್ವವಿದ್ಯಾಲಯಕ್ಕೆ ಆರನೇ ರ್ಯಾಂಕ್ ಗಳಿಸಿರುತ್ತಾರೆ. ವಿದ್ಯಾರ್ಥಿಗಳ ಈ ಶೈಕ್ಷಣಿಕ ಸಾಧನೆಗೆ ಸಂಸ್ಥೆಯ ಪ್ರಾಂಶುಪಾಲರು, ಉಪನ್ಯಾಸಕ ವರ್ಗ ಹಾಗೂ ಆಡಳಿತ ಮಂಡಳಿ ಅಭಿನಂದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News