ಕುಂದಾಪುರ: ಅನಧಿಕೃತ ರಚನೆ ತೆರವಿಗೆ ಸೂಚನೆ
Update: 2018-10-06 19:55 IST
ಉಡುಪಿ, ಅ.6: ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಗಿ ಪಡೆಯುವ ಸಂದಭರ್ ವಾಹನ ನಿಲುಗಡೆಗೆ ಕಾಯ್ದಿರಿಸಿದ ಸ್ಥಳವನ್ನು ಅನಧಿಕೃತವಾಗಿ ಬೇರೆ ಉದ್ದೇಶಕ್ಕೆ ಬಳಸಿರುವುದು ಕಂಡುಬಂದಿದ್ದು, ಅಂತಹ ರಚನೆಗಳನ್ನು 15 ದಿನಗಳ ಒಳಗಾಗಿ ತೆರವು ಮಾಡಬೇಕು. ತಪ್ಪಿದ್ದಲ್ಲಿ ಪುರಸಭೆ ವತಿಯಿಂದ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಕುಂದಾಪುರ ಪುರಸಭೆ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.