×
Ad

ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ತರಬೇತಿಗೆ ಅರ್ಜಿ ಆಹ್ವಾನ

Update: 2018-10-06 20:24 IST

ಉಡುಪಿ, ಅ.6: ಉಡುಪಿ ಜಿಲ್ಲಾ ಸರಕಾರಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದಲ್ಲಿ 2018-19ನೇ ಸಾಲಿನ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಅರ್ಜಿಯನ್ನು ಆಹ್ವಾನಿಸಿದ್ದಾರೆ.

ತರಬೇತಿ ಅವಧಿ 24 ತಿಂಗಳುಗಳಾಗಿದ್ದು, 2018ರ ಡಿ.31ಕ್ಕೆ ಕನಿಷ್ಠ 17 ವರ್ಷದಿಂದ ಗರಿಷ್ಠ 30ರ ವಯೋಮಾನದ, ದ್ವಿತೀಯ ಪಿಯುಸಿ/10+2 ಪರೀಕ್ಷೆಯಲ್ಲಿ (ಕನ್ನಡವನ್ನು ಒಂದು ವಿಷಯವಾಗಿ ತೆಗೆದುಕೊಂಡು) ಉತ್ತೀರ್ಣ ರಾದ ಮಹಿಳಾ ಅಭ್ಯರ್ಥಿಗಳು ಹಾಗೂ ಕನಿಷ್ಠ 5 ವರ್ಷ ಕರ್ನಾಟಕ ರಾಜ್ಯದಲ್ಲಿ ವಿದ್ಯಾಭ್ಯಾಸ ಮಾಡಿದವರು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ನಮೂನೆಯನ್ನು -www.karhfw.gov.in- ವೆಬ್‌ಸೈಟ್‌ನ ಹೋಮ್ ಪೇಜ್‌ನ ಕೆಳಭಾಗದ ಮುಖ್ಯ ಕೊಂಡಿಗಳನ್ನು ವೀಕ್ಷಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ (SIHFW)ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಪಡೆಯಬಹುದಾಗಿದೆ. ವೇಳಾಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಅಥವಾ ಡಿಎಚ್‌ಓ ಕಚೇರಿ ನೋಟೀಸ್ ಬೋರ್ಡಿನಲ್ಲಿ ಪರಿಶೀಲಿಸಬಹುದು.

ಅಭ್ಯರ್ಥಿಗಳು ದ್ವಿಪ್ರತಿಯಲ್ಲಿ ಅರ್ಜಿಯನ್ನು ತಮ್ಮ ಸ್ವಹಸ್ತಾಕ್ಷರದಲ್ಲಿ ಭರ್ತಿಮಾಡಿ ಒಂದು ಅರ್ಜಿಯನ್ನು ಉಡುಪಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಹಾಗೂ ಇನ್ನೊಂದು ಅರ್ಜಿಯನ್ನು ನಿರ್ದೇಶಕರು, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ, ಮಾಗಡಿ ರಸ್ತೆ, ಬೆಂಗಳೂರು ಇಲ್ಲಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಅ.20 ಕೊನೆಯ ದಿನ.

ಹೆಚ್ಚಿನ ಮಾಹಿತಿಗೆ ಕಚೇರಿಯ ನೋಟೀಸ್ ಬೋರ್ಡನ್ನು ವೀಕ್ಷಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News