ಮಹಿಳೆಯ ಓಲೈಕೆಗೆ ಯತ್ನಿಸಿದ ಚಾಟ್ ವೈರಲ್: ಕ್ಷಮೆ ಯಾಚಿಸಿದ ಪ್ರಸಿದ್ಧ ಬರಹಗಾರ ಚೇತನ್ ಭಗತ್

Update: 2018-10-06 15:09 GMT

ಹೊಸದಿಲ್ಲಿ, ಅ.6:  ಇತ್ತೀಚೆಗೆ ಪ್ರಸಿದ್ಧ ಬರಹಗಾರ ಚೇತನ್ ಭಗತ್ ಮಹಿಳೆಯೊಂದಿಗೆ ನಡೆಸಿದ ಚಾಟ್ ನ ಸ್ಕ್ರೀನ್ ಶಾಟ್ ಲೈಂಗಿಕ ಕಿರುಕುಳ ಆರೋಪದಲ್ಲಿ ವೈರಲ್ ಆಗಿತ್ತು. ಇದೀಗ ಈ ಆರೋಪಕ್ಕೆ ಸಂಬಂಧಿಸಿ ಚೇತನ್ ಭಗತ್ ಕ್ಷಮೆಯಾಚಿಸಿದ್ದಾರೆ.

ಮಹಿಳೆಯೊಬ್ಬರ ಜೊತೆ ಚಾಟ್ ಮಾಡಿದ್ದ ಚೇತನ್ ಭಗತ್ ಆಕೆಯನ್ನು ‘ಮನವೊಲಿಸಲು’ ಯತ್ನಿಸಿದ್ದರು ಎಂದು ಆರೋಪಿಸಲಾಗಿತ್ತು. ಈ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆರೋಪಗಳಿಗೆ ಸಂಬಂಧಿಸಿ ಚೇತನ್ ಭಗತ್ ಫೇಸ್ಬುಕ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ತಾನು ಚಾಟ್ ಮಾಡಿದ್ದು ಸತ್ಯ. ಅದಕ್ಕಾಗಿ ಮಹಿಳೆ ಹಾಗು ತನ್ನ ಪತ್ನಿಯ ಜೊತೆ ಕ್ಷಮೆ ಯಾಚಿಸುತ್ತಿದ್ದೇನೆ. “ನಾನು ಉತ್ತಮ ತೀರ್ಮಾನ ಹೊಂದಬೇಕಿತ್ತು. ನಾನು ಕೊಂಚ ತಪ್ಪಿದೆ ಎಂದುಕೊಳ್ಳುತ್ತೇನೆ” ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News