ಅಕ್ಟೋಬರ್ ‘ಹಿಂದೂ ಪರಂಪರೆ ತಿಂಗಳು’ ಘೋಷಣೆಗೆ ಮಸೂದೆ ಮಂಡನೆ
Update: 2018-10-06 22:11 IST
ಟೊರಾಂಟೊ (ಕೆನಡ), ಅ. 6: ಕೆನಡದಲ್ಲಿ ಅಕ್ಟೋಬರ್ ತಿಂಗಳನ್ನು ‘ಹಿಂದೂ ಪರಂಪರೆ ತಿಂಗಳು’ ಎಂಬುದಾಗಿ ಹೆಸರಿಸುವ ಮಸೂದೆಯೊಂದನ್ನು ಹೌಸ್ ಆಫ್ ಕಾಮನ್ಸ್‌ನಲ್ಲಿ ಮಂಡಿಸಲಾಗಿದೆ.
‘‘ನಮ್ಮ ದೇಶದ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಪ್ರಗತಿಯಲ್ಲಿ ಹಿಂದೂ ಕೆನಡಿಯನ್ನರು ವಹಿಸಿದ ಮಹತ್ವದ ಪಾತ್ರವನ್ನು ಮಾನ್ಯ ಮಾಡಿ ಈ ಮಸೂದೆಯನ್ನು ಮಂಡಿಸುವ ಗೌರವ ನನಗೆ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗಿದೆ’’ ಎಂದು ಭಾರತ-ಕೆನಡಿಯನ್ ಸಂಸದ ದೀಪಕ್ ಒಭ್ರಾಯ್ ಹೇಳಿದರು.
‘‘ಕೆನಡದ ಖ್ಯಾತ ಬಹುಸಂಸ್ಕೃತಿಯ ನೆಲದಲ್ಲಿ ಹಿಂದೂ ಕೆನಡಿಯನ್ನರು ಮಹತ್ವದ ಕೊಂಡಿಯಾಗಿದ್ದಾರೆ. ದೇಶದ ಯಶೋಗಾಥೆಯಲ್ಲಿ ಅವರು ಪಾಲು ಹೊಂದಿದ್ದಾರೆ. ಜಗತ್ತಿನ ಶ್ರೇಷ್ಠ ದೇಶಗಳಲ್ಲಿ ಕೆನಡ ಒಂದಾಗಿರುವುದರಲ್ಲಿ ಅವರ ಪಾಲೂ ಇದೆ. ನೆನಪಿಸಲು, ಆಚರಿಸಲು ಹಾಗೂ ಗೊತ್ತಿಲ್ಲದವರಿಗೆ ಹೇಳಿಕೊಡಲು ಅದೊಂದು ಉತ್ತಮ ಅವಕಾಶ’’ ಎಂದು ಆಲ್ಬರ್ಟ ರಾಜ್ಯದ ಕ್ಯಾಲ್ಗರಿ ಫಾರೆಸ್ಟ್ ಲಾನ್ ಪ್ರತಿನಿಧಿಸುವ ದೀಪಕ್ ಹೇಳಿದರು.