×
Ad

ಕಲ್ಯಾಣಪುರದಲ್ಲಿ ರಸ್ತೆ ಸುರಕ್ಷತೆಗಾಗಿ ಜಾಥಾ

Update: 2018-10-06 22:28 IST

ಕಲ್ಯಾಣಪುರ, ಅ. 6: ಕಲ್ಯಾಣಪುರ ರೋಟರಿ ಕ್ಲಬ್‌ನ ಸದಸ್ಯರು ರೋಟರಿ ಜಿಲ್ಲೆ 3182 ವಲಯ 9ರ ರೋಟರಿ ಸಂಸ್ಥೆ ಹಾಸನದ ಸದಸ್ಯರೊಂದಿಗೆ ಅಂತಾರಾಷ್ಟೀಯ ಒಡನಾಟದ ಅಂಗವಾಗಿ ರಸ್ತೆ ಸುರಕ್ಷತತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ದ್ವಿಚಕ್ರ ವಾಹ ಜಾಥಾವನ್ನು ಹಮ್ಮಿ ಕೊಂಡಿದ್ದರು.

ಈ ಜಾಥಾ ಕಲ್ಯಾಣಪುರ, ಮೂಡುತೋನ್ಸೆ, ಪಡುತೋನ್ಸೆ ಮತ್ತು ಪುತ್ತೂರು ಗ್ರಾಮದ ಸುತ್ತಮುತ್ತ ಪರಿಸರದಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತತೆಯ ಬಗ್ಗೆ ಸಂದೆೀಶವನ್ನು ನೀಡಲಾಯಿತು.

 ಜಾಥವು ರೋಟರಿ ವಲಯ 9ರ ಸಹಾಯಕ ಗವರ್ನರ್ ಮೋಹನ್ ದಾಸಪ್ಪಅವರ ನೇತೃತ್ವದಲ್ಲಿ ನಡೆಯಿತು. ವಲಯ 3ರ ಸಹಾಯಕ ಗವರ್ನರ್ ಸುಬ್ಬಣ್ಣ ಪೈ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಅಲೆನ್ ಲೂಯಿಸ್‌ರ ತಾಯಿ ಅವರನ್ನು ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News