×
Ad

ನಿಟ್ಟೆ: ಕ್ಷೇಮ ಗ್ಯಾಸ್ಟ್ರೋ ಅಪ್‍ಡೇಟ್' ಕಾರ್ಯಗಾರ

Update: 2018-10-06 22:51 IST

ಉಳ್ಳಾಲ, ಅ. 6: ಆಸ್ಪತ್ರೆಯ ವೈದ್ಯಕೀಯ ವಿಭಾಗದಲ್ಲಿ ಗ್ಯಾಸ್ಟ್ರೋಂಟರಾಲಜಿ ಯುವ ವಿಭಾಗವಾದರೂ ಕೆಲ ವರ್ಷಗಳಲ್ಲಿ ಹಲವು ಸಾಧನೆಗಳನ್ನು ಪೂರೈಸುತ್ತಾ ಮುಂದುವರಿದಿರುವುದು ಆಸ್ಪತ್ರೆಯ ಹಿರಿಮೆಯಾಗಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಸಚಿವ ಡಾ. ಸತೀಶ್ ಕುಮಾರ್ ಭಂಡಾರಿ ಅಭಿಪ್ರಾಯಪಟ್ಟರು.

ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿಯ ವೈದ್ಯಕೀಯ ಮತ್ತು ಗ್ಯಾಸ್ಟ್ರೋಂಟರಾಲಜಿ ವಿಭಾಗ ಆಶ್ರಯದಲ್ಲಿ ದೇರಳಕಟ್ಟೆ  ಕ್ಷೇಮ ಆಸ್ಪತ್ರೆಯ ಸೆಮಿನಾರ್ ಹಾಲ್‍ನಲ್ಲಿ ಶನಿವಾರ ಜರಗಿದ `ಕ್ಷೇಮ ಗ್ಯಾಸ್ಟ್ರೋ ಅಪ್‍ಡೇಟ್' ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ವಿ.ವಿಯಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು  ವೈದ್ಯಕೀಯ ಸೇವೆಯಲ್ಲಿ ಯುವ ವಿಭಾಗವಾಗವಾದರೂ ಗ್ಯಾಸ್ಟ್ರೋಂಟರಾಲಜಿಗೆ ಪೂರೈಸಲು ಬದ್ಧ. ಅವಕಾಶಗಳು ಎಲ್ಲಾ ವಿಭಾಗಗಳಲ್ಲಿಯೂ ಇದೆ. ಯಂತ್ರದ ಹಿಂದಿನ ಮಾನವನ ಕೆಲಸ ಯಶಸ್ಸಿನ ಹಾದಿ ಹಿಡಿಯುವಲ್ಲಿ ವಿಭಾಗದ ಬೆಳವಣಿಗೆಯೂ ಸಾಧ್ಯ. ಆಸ್ಪತ್ರೆಯ ಈ ವಿಭಾಗ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಯಕೃತ್ತಿನ ಕಸಿ  ಚಿಕಿತ್ಸೆಯನ್ನು ನೀಡುವಂತಾಗಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕ್ಷೇಮ ಡೀನ್ ಡಾ. ಪಿ. ಎಸ್ ಪ್ರಕಾಶ್ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಕೆಎಂಸಿ ಮಣಿಪಾಲದ ಗ್ಯಾಸ್ಟ್ರೋಂಟರಾಲಜಿ ವಿಭಾಗ ಮುಖ್ಯಸ್ಥ  ಡಾ. ಗಣೇಶ್ ಪೈ,  ಮಂಗಳೂರು  ಕೆಎಂಸಿಯ ಗ್ಯಾಸ್ಟ್ರೋಂಟರಾಲಜಿ ವಿಭಾಗ ಮುಖ್ಯಸ್ಥ ಡಾ. ಬಿ.ವಿ ವಿಶ್ವನಾಥ್ ತಂತ್ರಿ,  ಎ.ಜೆ ಮೆಡಿಕಲ್ ಸೈನ್ಸ್ ಗ್ಯಾಸ್ಟ್ರೋಂಟರಾಲಜಿ ವಿಭಾಗ ಮುಖ್ಯಸ್ಥ ಡಾ. ರಾಘವೇಂದ್ರ ಪ್ರಸಾದ್, ಬೆಂಗಳೂರು  ಬಿಜಿಎಸ್ ಗ್ಲೋಬಲ್ ಹೆಪಟೋಬಿಲಿಯೆರಿ ಸರ್ಜನ್  ಡಾ. ರಾಘವೇಂದ್ರ ಸಿ.ವಿ,  ವೈದ್ಯಕೀಯ ವಿಭಾಗದ ಡಾ. ರಾಘವ್ ಶರ್ಮಾ, ಡಾ.| ಸುರೇಂದ್ರ ರಾವ್, ಕ್ಷೇಮ ಆಸ್ಪತ್ರೆಯ ಗ್ಯಾಸ್ಟ್ರೋಂಟರಾಲಜಿ ವಿಭಾಗದ ಡಾ. ಗಣರಾಜ್, ಡಾ.  ಚಂದ್ರಶೇಖರ್ ಉಪಸ್ಥಿತರಿದ್ದರು.

ಡಾ. ರೋಹಿನ್ ದುಬ್ಬಾಳ್ ಕಾರ್ಯಕ್ರಮ ನಿರೂಪಿಸಿದರು. ಡಾ. ಗಣರಾಜ್ ಸ್ವಾಗತಿಸಿದರು. ಡಾ.| ಸುರೇಂದ್ರ ರಾವ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News