×
Ad

ಯೆನೆಪೊಯ ಕಾಲೇಜಿನಲ್ಲಿ ವಿಶ್ವ ಹೃದಯ ದಿನಾಚರಣೆ

Update: 2018-10-06 22:55 IST

ಕೊಣಾಜೆ, ಅ. 6: ಮಂಗಳೂರು ದೇರಳಕಟ್ಟೆಯ ಯೆನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಇದರ  ಹೃದ್ರೋಗ ಚಿಕಿತ್ಸಾ ವಿಭಾಗ ಮತ್ತು ಮಾರ್ಕೆಟಿಂಗ್ ವಿಭಾಗದ ಆಶ್ರಯದಲ್ಲಿ ವಿಶ್ವ ಹೃದಯ ದಿನಾಚರಣೆ ಜಾಗೃತಿ ಕಾರ್ಯಕ್ರಮ ಇತ್ತೀಚೆಗೆ ಆಸ್ಪತ್ರೆಯ ಹೊರಾಂಗಣದಲ್ಲಿ ನಡೆಯಿತು.

ಶಿಬಿರದಲ್ಲಿ ಉಚಿತವಾಗಿ ರಕ್ತದ ಒತ್ತಡ, ರಕ್ತದಲ್ಲಿ ಸಕ್ಕರೆ ಕಾಯಿಲೆ, ಇಸಿಜಿ ಪರೀಕ್ಷೆಗಳೊಂದಿಗೆ ಹೃದ್ರೋಗಿಗಳು ಸೇವಿಸುವ ಆಹಾರ ಕ್ರಮಗಳ ಬಗ್ಗೆ ಮಾಹಿತಿ ಹಾಗೂ ಇದರ ಜನಜಾಗೃತಿ ಮತ್ತು ಅರಿವು ಮೂಡಿಸಲು ವಿವಿಧ ನಮೂನೆಯ ಕರಪತ್ರಗಳನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News