ಮನುಷ್ಯರಲ್ಲಿ ಒಳ್ಳೆಯ ಅಭ್ಯಾಸ ಇದ್ದರೆ ಮಾತ್ರ ಆರೋಗ್ಯ: ಜಯರಾಮ್ ಪೂಜಾರಿ

Update: 2018-10-07 12:53 GMT

ಮಂಜನಾಡಿ, ಅ. 7: ಮನುಷ್ಯರಲ್ಲಿ ಒಳ್ಳೆಯ ಅಭ್ಯಾಸಗಳು ಮೇಲೈಸಿದರೆ ಮಾತ್ರ ಆತ ಆರೋಗ್ಯ ಪೂರ್ಣರಾಗಿರುತ್ತಾನೆ. ಆತ ಸದಾ ಚಟುವಟಿಕೆಯಿಂದಿರ ಬೇಕು ಆಗಿದ್ದಲ್ಲಿ ಮಾತ್ರ ಕೆಟ್ಟ ಚಟುವಟಿಕೆಗಳು ಆತನಿಂದ ದೂರವಾಗಬಹುದು ಎಂದು ದ.ಕ. ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಮೇಲ್ವಿಚಾರಕರಾದ ಜಯರಾಮ್ ಪೂಜಾರಿ ಹೇಳಿದರು.

ಅವರು ಮಂಜನಾಡಿ ಅಲ್ ಮದೀನಾದ ವಿದ್ಯಾರ್ಥಿಗಳ ಕಲಾ ಸಂಘಟನೆ ಬಿಶಾರತುಲ್ ಮದೀನಾ ವಿದ್ಯಾರ್ಥಿ ಒಕ್ಕೂಟ ಸಂಸ್ಥೆಯ ಬೆಳ್ಳಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ‘ಹೆಲ್ತ್ ಟಾಕ್’ ನಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.

ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ವ್ಯಭಿಚಾರದ ವಿಷಯದಲ್ಲಿನ ತೀರ್ಪಿನ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು “ಮನುಷ್ಯನು ಪ್ರಕೃತಿದತ್ತ ವಾಗಿಯೇ ಮುಂದುವರಿಯಬೇಕು, ಯಾವಾಗ ಪ್ರಕೃತಿಯ ವಿರುದ್ಧ ನಡೆಯುತ್ತಾನೋ ಅದು ಅವನ ಶಿಕ್ಷಣದ ದುರಂತವಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಅಬ್ದುಸ್ಸಲಾಂ ಅಹ್ಸನಿ ಉಸ್ತಾದ್ ಅಧ್ಯಕ್ಷತೆ ವಹಿಸಿದರು. ಅಬ್ದುರ್ರಹ್ಮಾನ್ ವಳಾಲ್ ಉದ್ಘಾಟಿಸಿ,  ಮಾತನಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಜಯರಾಂ ಪೂಜಾರಿ ಅವರಿಗೆ  ಸ್ಮರಣಿಕೆ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಸಯ್ಯದ್ ಮುಹಮ್ಮದ್ ಶಾಹಿಲ್ ಮಿತ್ತಬೈಲ್, ತಾಲೂಕು ಕುಟುಂಬ ಕಲ್ಯಾಣ ಇಲಾಖೆ ಮೇಲ್ವಿಚಾರಕ ಸಂದೀಪ್, ನರಿಂಗಾನ ಕುಟುಂಬ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಆಶಾ, ವಿದ್ಯಾರ್ಥಿ ನಾಯಕರಾದ ಮುಹಮ್ಮದ್ ನಿಝಾರ್, ಶಫೀಕ್ ಬೊಳ್ಮಾರ್, ಬಿಶಾರತುಲ್ ಮದೀನಾ ಕಾರ್ಯದರ್ಶಿ ಶರೀಫ್ ವಳಾಲ್, ಉಪಸ್ಥಿತರಿದ್ದರು.

ಬಿಶಾರತುಲ್ ಮದೀನಾ ಅಧ್ಯಕ್ಷರು ಅನೀಸ್ ಸುರತ್ಕಲ್ ಸ್ವಾಗತಿಸಿ, ನಿರೂಪಿಸಿದರು. ಕೋಶಾಧಿಕಾರಿ ನೌಶಾದ್ ಕಲ್ಮಿಂಜ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News