ಮಳೆಗಾಲ ಮುಗಿದರೂ ಮುಗಿಯದ ಪಳ್ಳಿಹೊಳೆ ಕಾಮಗಾರಿ; ಸಾರ್ವಜನಿಕರಿಂದ ಆಕ್ರೋಶ

Update: 2018-10-07 12:57 GMT

ಭಟ್ಕಳ, ಅ. 7:  ಶಿರಾಲಿ ಅಳ್ಳೆಕೋಡಿಯನ್ನು ಸಂಪರ್ಕಿಸುವ ಪಳ್ಳಿಹೊಳೆ ಸೇತುವೆ ಕಾಮಗಾರಿ ಕೈಗೆತ್ತಿಕೊಂಡು ಐದಾರು ತಿಂಗಳುಗಳೇ ಗತಿಸಿದ್ದು ಮಳೆಗಾಲ ಮುಗಿದರೂ ಇನ್ನೂ ತನಕ ಕಾಮಗಾರಿ ಪೂರ್ಣಗೊಳ್ಳುವ ಯಾವುದೇ ಲಕ್ಷಣಗಳು ಗೋಚರಿಸಿದೆ ಆ ಭಾಗದ ಸಾರ್ವಜನಿಕರು ಆಕ್ರೋಶಿತರಾಗಿದ್ದು ಪ್ರತಿಭಟನೆಯ ಎಚ್ಚರಿಕೆಯನ್ನು ತಿಳಿಸಿದ್ದಾರೆ.

ಶಿರಾಲಿಯ ಪಳ್ಳಿಹೊಳೆ ಸೇತುವೆ ಶಿಥಿಲಗೊಂಡು ಸಾರ್ವಜನಿಕರ ಆಗ್ರಹದ ಮೇರೆಗೆ ಆಗಿನ ಶಾಸಕ ಮಾಂಕಾಳ ವೈದ್ಯ ಆಸಕ್ತಿವಹಿಸಿ ಕಾಮಗಾರಿಯನ್ನು ಆರಂಭಿಸಿದ್ದು ಮಳೆಗಾಲದ ಕುಂಟು ನೆಪ ಹೇಳಿಕೊಂಡು ಕಾಮಗಾರಿಯನ್ನು ಅರ್ಧದಲ್ಲೆ ನಿಲ್ಲಿಸಿ ಕೈತೊಳೆದುಕೊಂಡಿದ್ದ ಗುತ್ತಿಗೆದಾರರು ಮಳೆಗಾಲ ಮುಗಿದರೂ ಕಾಮಗಾರಿಯನ್ನು ಆರಂಭಿಸದೆ ಅದಕ್ಕಾಗಿ ಮೀನಮೇಷ ಎಣಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾತ್ಕಾಲಿಕವಾಗಿ ನಿರ್ಮಿಸಿದ ರಸ್ತೆಯು ಮಳೆಗ ಕೊಚ್ಚಿಕೊಂಡು ಹೋಗಿದ್ದು ಇತಿಹಾಸ ಪ್ರತಿಸಿದ್ದ ಅಳ್ವೆಕೋಡಿ ದೇವಸ್ಥಾನಕ್ಕೆ ನೂರಾರು ಭಕ್ತರು ದಿನಾಲೂ ಓಡಾಡುವ ಈ ಸೇತುವೆ ತನ್ನ ಸಂಪರ್ಕ ಕಳೆದುಕೊಂಡಿದ್ದರಿಂದಾಗಿ ಆ ಭಾಗದ ಶಾಲಾಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಹಾಗೂ ಭಕ್ತರಿಗೆ ತೀವ್ರ ತೊಂದರೆಯುಂಟಾಗುತ್ತಿದೆ. ಅಲ್ಲದೆ ನಿತ್ಯವೂ ನೂರಾರು ಮಂದಿ ಓಡಾಡುವ ಸೇತುವೆಯ ಕಾಮಗಾರಿ ಆದಷ್ಟುಬೇಗನೆ ಪೂರ್ಣಗೊಳಿಸಬೇಕೆಂಬ ಆಗ್ರಹ ಎಲ್ಲಡೆಯಿಂದ ಕೇಳಿ ಬರುತ್ತಿದೆ. 

ಸೇತುವೆ ಕಾಮಗಾರಿ ಆದಷ್ಟು ಬೇಗನೆ ಆರಂಭಿಸದೆ ಹೋದರೆ ಉಗ್ರಹೋರಾಟ ಮಾಡುವುದಾಗಿ ಸಾರ್ವಜನಿಕರು ಗುತ್ತಿಗೆದಾರರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News