×
Ad

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ: ಸಂಚಾರ ಬದಲಾವಣೆ

Update: 2018-10-07 19:50 IST

ಕುಂದಾಪುರ, ಅ.7: ಕುಂದಾಪುರ ಬಸ್ರೂರು ಮೂರುಕೈ ಜಂಕ್ಷನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕುರಿತು ವೈಕ್ಯುಲರ್ ಅಂಡರ್ ಪಾಸ್ ಕಾಮಗಾರಿ ಯನ್ನು ಪ್ರಾರಂಭಿಸಲಾಗಿದ್ದು, ಎಲ್ಲಾ ವಾಹನ ಚಾಲಕರು ಸರ್ವಿಸ್ ರಸ್ತೆ ಬಸುವಂತೆ ಸೂಚಿಸಲಾಗಿದೆ.

ಕುಂದಾಪುರದಿಂದ ಉಡುಪಿ ಮಂಗಳೂರು ಮಾರ್ಗವಾಗಿ ಹೋಗುವವರು, ಬೊಬ್ಬರ್ಯನ ಕಟ್ಟೆ ಬಳಿ ಎಡಕ್ಕೆ ತಿರುಗಿ ಸರ್ವಿಸ್ ರಸ್ತೆಯ ಮೂಲಕ ವಿನಾಯಕ ಥಿಯೇಟರ್ ಬಳಿ ಬಲಕ್ಕೆ ತಿರುಗಿ ಹೆದ್ದಾರಿಯನ್ನು ತಲುಪಬಹುದು. ಜೊತೆಗೆ ಮೂರುಕೈ ಮುಖಾಂತರ ಕುಂದಾಪುರ ಕಡೆಗೆ ಹೋಗುವವರು ಎಡಕ್ಕೆ ತಿರುಗಿ ಯು ಟರ್ನ್ ಬಳಸಬೇಕಾಗುತ್ತದೆ.

ಉಡುಪಿಯಿಂದ ಬೈಂದೂರು ಕಡೆಗೆ ಹೋಗುವವರು ವಿನಾಯಕ ಥಿಯೇಟರ್ ಬಳಿ ಎಡಕ್ಕೆ ತಿರುಗಿ, ಸರ್ವಿಸ್ ರಸ್ತೆ ಬಳಸಿ, ಶಾಸ್ತ್ರೀ ವೃತ್ತ ತಲುಪ ಬೇಕಾಗಿರುತ್ತದೆ. ಜೊತೆಗೆ ಉಡುಪಿಯಿಂದ ಸಿದ್ದಾಪುರ ಶಿವಮೊಗ್ಗ ಹೋಗುವ ವರು ಬೊಬ್ಬರ್ಯನ ಕಟ್ಟೆ ಬಳಿ ಯು ಟರ್ನ್ ಬಳಸಬೇಕಾಗುತ್ತದೆ. ಸರ್ವಿಸ್ ರಸ್ತೆಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಕುಂದಾಪುರ ವಿಭಾಗದ ಸಹಾಯಕ ಆಯುಕ್ತ ೂಬಾಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News