×
Ad

ರಾಜ್ಯ ಮ್ಯುಥಾಯ್ ಚಾಂಪಿಯನ್‌ಶಿಪ್‌ಗೆ ಚಾಲನೆ

Update: 2018-10-07 20:07 IST

ಮಂಗಳೂರು, ಅ.7: ದ.ಕ.ಜಿಲ್ಲಾ ಮ್ಯುಥಾಯ್ ಅಸೋಸಿಯೇಶನ್ ವತಿಯಿಂದ ನಗರದ ಲಾಲ್‌ಭಾಗ್‌ನ ಆಫೀಸರ್ಸ್ ಕ್ಲಬ್‌ನಲ್ಲಿ ರವಿವಾರ ನಡೆದ ಕರ್ನಾಟಕ ಮ್ಯುಥಾಯ್ ಚಾಂಪಿಯನ್‌ಶಿಪ್‌ಗೆ ಚಾಲನೆ ನೀಡಲಾಯಿತು.

ಪಂದ್ಯಾಟಕ್ಕೆ ಚಾಲನೆ ನೀಡಿದ ಕರ್ನಾಟಕ ಮ್ಯುಥಾಯ್ ಅಸೋಸಿಯೇಶನ್‌ನ ಗೌರವಾಧ್ಯಕ್ಷ ಎ.ಸದಾನಂದ ಶೆಟ್ಟಿ, ಮ್ಯುಥಾಯ್ ಸ್ವಯಂ ರಕ್ಷಣೆಗೆ ಇರುವ ಕಲೆ. ಇದು ಜಿಲ್ಲೆಯ ಜನರಿಗೆ ಹೊಸ ಕ್ರೀಡೆಯಾಗಿರುವುದರಿಂದ ಹೆಚ್ಚಿನ ಜನರಿಗೆ ಈ ಬಗ್ಗೆ ಮಾಹಿತಿ ಕೊರತೆ ಇದೆ. ಯಾವುದೇ ಕಲೆ, ಕ್ರೀಡೆಗಳು ಜಿಲ್ಲೆಯ ಜನತೆಗೆ ಒಮ್ಮೆ ಪರಿಚಯವಾದರೆ ಬಳಿಕ ಶಾಶ್ವತವಾಗಿ ಉಳಿಯುತ್ತದೆ ಮತ್ತು ಜನ ರು ಅದನ್ನು ಅಪಾರವಾಗಿ ಮೆಚ್ಚಿಕೊಳ್ಳುತ್ತಾರೆ ಎಂದರು.

ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮಾತನಾಡಿ ಎಲ್ಲಾ ವಿಧದ ಕ್ರೀಡೆಗಳು ದೇಹಾರೋಗ್ಯಕ್ಕೆ ಪೂರಕವಾಗಿದೆ. ಯುವಜನತೆ ವೈವಿಧ್ಯಮಯ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್, ಡಿಐಸಿ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್, ಮಾಂಡ್ ಸೋಬಾಣ್ ಅಧ್ಯಕ್ಷ ಲೂಯಿಸ್ ಪಿಂಟೋ, ಯುನೈಟೆಡ್ ಅಮೆಚೂರ್ ಮ್ಯುಥಾಯ್ ಅಸೋಸಿಯೇಶನ್ ಆ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ದಯಾಚಂದ್ ಭೋಲಾ , ಪ್ರಮುಖರಾದ ಕರುಣಾಕರನ್, ಡಾ. ಅಣ್ಣಯ್ಯ ಕುಲಾಲ್, ಬಾಲಕೃಷ್ಣ ಶೆಟ್ಟಿ, ರಾಘವೇಂದ್ರ ಭಟ್, ಮುಹಮ್ಮದ್ ನವೀಝ್, ಬಿಪಿನ್‌ರಾಜ್ ರೈ, ಸಚಿನ್‌ರಾಜ್ ರೈ. ದ.ಕ.ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ.ಅಸ್ಲಂ ಮತ್ತಿತರರು ಉಪಸ್ಥಿತರಿದ್ದರು. ಮ್ಯುಥಾಯ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ರಾಜಗೋಪಾಲ್ ರೈ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News