‘ಮೇಲ್ತೆನೆ’ ಆನ್‌ಲೈನ್ ಬ್ಯಾರಿ ಅನುವಾದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ
ಮಂಗಳೂರು, ಅ.7: ದೇರಳಕಟ್ಟೆಯ ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗ ‘ಮೇಲ್ತೆನೆ’ಯು ಬ್ಯಾರಿ ಭಾಷಾ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡ ಬ್ಯಾರಿ ಅನುವಾದ ಕಥಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ದೇರಳಕಟ್ಟೆಯ ಆ್ಯಂಬಿಟ್ ಎಜುಕೇಶನಲ್ ಟ್ರಸ್ಟ್‌ನ ಸಭಾಂಗಣ ದಲ್ಲಿ ರವಿವಾರ ಜರುಗಿತು.
ಮೇಲ್ತೆನೆಯ ಗೌರವಾಧ್ಯಕ್ಷ ಅಲಿಕುಂಞಿ ಪಾರೆ ಕಾರ್ಯಕ್ರಮ ಉದ್ಘಾಟಿಸಿದರು. ಮೇಲ್ತೆನೆಯ ಅಧ್ಯಕ್ಷ ಬಶೀರ್ ಅಹ್ಮದ್ ಕಿನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಸಿ.ಎಂ. ಫಾರೂಕ್, ತೊಕ್ಕೊಟ್ಟಿನ ಕೆಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರದ ವ್ಯವಸ್ಥಾಪಕ ಸಾದಾತ್ ನಾಲೂರು, ಆ್ಯಂಬಿಟ್ ಎಜುಕೇಶನಲ್ ಟ್ರಸ್ಟ್‌ನ ನಿರ್ದೇಶಕ ಅಮೀರ್ ಶಾಫಿ ಭಾಗವಹಿಸಿ ಶುಭ ಹಾರೈಸಿದರು.
ಕೆ.ವೈ. ಹಮೀದ್ ಕುಕ್ಕಾಜೆ (ಪ್ರಥಮ), ಶಿಹಾಬ್ ಉಪ್ಪಿನಂಗಡಿ (ದ್ವಿತೀಯ), ಝುಲೇಖಾ ಮುಮ್ತಾಝ್ (ತೃತೀಯ) ಹಾಗೂ ಎ.ಕೆ.ನಂದಾವರ, ರಶೀದಾ ಮನಾಲ್, ಶಮ್ಮಿ ಪಾನೆಲ, ಬಿ.ಎಂ.ಹಾರಿಸ್ ಬಾಂಬಿಲ, ಸುಮಯ್ಯಿ ಫರ್ವೀನ್ ಬಜ್ಪೆ, ನಿಝಾಮ್ ಗೋಳಿಪಡ್ಪು ಅವರು ಸಮಾಧಾನಕರ ಬಹುಮಾನ ಪಡೆದುಕೊಂಡರು.
ಮೇಲ್ತೆನೆಯ ಸದಸ್ಯರಾದ ನಿಝಾಮ್ ಬಜಾಲ್ ಕಿರಾಅತ್ ಪಠಿಸಿದರು. ಇಸ್ಮಾಯೀಲ್ ಟಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮನ್ಸೂರ್ ಅಹ್ಮದ್ ಸಾಮಣಿಗೆ ಸ್ವಾಗತಿಸಿದರು. ತೀರ್ಪುಗಾರರ ಪರವಾಗಿ ನಿಯಾಝ್ ಪಿ. ಅನಿಸಿಕೆ ವ್ಯಕ್ತಪಡಿಸಿದರು. ಮೇಲ್ತೆನೆಯ ರಫೀಕ್ ಪಾನೇಲ, ಆರಿಫ್ ಕಲ್ಕಟ್ಟ, ಮುಹಮ್ಮದ್ ಬಾಷಾ ನಾಟೆಕಲ್ ಉಪಸ್ಥಿತರಿದ್ದರು. ಬಶೀರ್ ಕಲ್ಕಟ್ಟ ವಂದಿಸಿದರು. ಹಂಝ ಮಲಾರ್ ಕಾರ್ಯಕ್ರಮ ನಿರೂಪಿಸಿದರು.
ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟು ಬಗ್ಗೆ ಯುವ ವಿಮರ್ಶಕ ಇಸ್ಮತ್ ಪಜೀರ್ ಮಂಡಿಸಿದ ಪ್ರಬಂಧದ ಬಗ್ಗೆ ಹಿರಿಯ ಸಾಹಿತಿ ಮುಹಮ್ಮದ್ ಬಡ್ಡೂರು ಮತ್ತು ಪಿ.ಎ.ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಝಹುರಾ ಅಬ್ಬಾಸ್ ಪ್ರತಿಕ್ರಿಯಿಸಿದರು.