×
Ad

ಸಹ್ಯಾದ್ರಿಯಲ್ಲಿ ‘ಬೌದ್ಧಿಕ ಆಸ್ತಿ ಕೋಶ’ಕ್ಕೆ ಚಾಲನೆ

Update: 2018-10-07 20:32 IST

ಮಂಗಳೂರು, ಅ.7: ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ(ವಿಟಿಪಿಸಿ), ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಮತ್ತು ರಾಜ್ಯ ಕೌನ್ಸಿಲ್ ಫಾರ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ (ಕೆಎಸ್ಸಿಎಸ್ಟಿ) ಸಹಯೋಗದೊಂದಿಗೆ ರವಿವಾರ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಬೌದ್ಧಿಕ ಆಸ್ತಿ (ಐಪಿ)ಕೋಶಕ್ಕೆ ಚಾಲನೆ ನೀಡಿ, ‘ಬೌದ್ಧಿಕ ಆಸ್ತಿ ಹಕ್ಕುಗಳು (ಐಪಿಆರ್): ವ್ಯವಹಾರ ಮತ್ತು ಸಂಶೋಧನೆಯ ಮಹತ್ವ’ ವಿಷಯದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದ ಮಂಗಳೂರಿನ ಡಿಐಸಿ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್, ಇಂದಿನ ಜಗತ್ತಿನಲ್ಲಿ ಹಕ್ಕುಸ್ವಾಮ್ಯದ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು. ಭಾರತವು ಜ್ಞಾನದ ನಿಧಿಯಾಗಿದ್ದು, ಐಪಿಆರ್‌ನ್ನು ರಕ್ಷಿಸಲು ಎಲ್ಲರ ಕರ್ತವ್ಯ. ಇಂಡಸ್ಟ್ರೀಸ್ ಮತ್ತು ವಿದ್ಯಾರ್ಥಿಗಳ ಪ್ರಯೋಜನಕ್ಕಾಗಿ ಈ ವಿಶೇಷ ಐಪಿಆರ್ ಸೆಂಟರ್‌ನ್ನು ಪ್ರಾರಂಭಿಸಲು ಮತ್ತು ಕಾರ್ಯಾಗಾರವನ್ನು ಸಂಘಟಿಸಲು ಸಹ್ಯಾದ್ರಿ ಕಾಲೇಜ್ ಮ್ಯಾನೇಜ್‌ಮೆಂಟ್‌ನ್ನು ಮೆಚ್ಚಿದರು.

ಕಾರ್ಯಾಗಾರದ ಮೊದಲಿಗೆ ಹಿರಿಯ ಐಪಿ ತಜ್ಞ ಡಾ.ಅರವಿಂದ್ ವಿಶ್ವನಾಥನ್, ಇಂಟೆಲೆಕ್ಚುಯಲ್‌ಪ್ರಾಪರ್ಟಿ ರೈಟ್ ಸ್ಪೆಕ್ಟ್ರಮ್‌ನ್ನು ಡೆಮಿಸ್ಟಿಫೈಯಿಂಗ್ ಬಗ್ಗೆ ಮಾಹಿತಿ ನೀಡಿದರು. ಅದರಲ್ಲಿ ವಿವಿಧ ಐಪಿ ಉಪಕರಣಗಳು- ಪೇಟೆಂಟ್‌ಗಳು, ಹಕ್ಕುಸ್ವಾಮ್ಯಗಳು, ಟ್ರೇಡ್‌ಮಾರ್ಕ್‌ಗಳು, ಕೈಗಾರಿಕಾ ವಿನ್ಯಾಸಗಳು, ಸೆಮಿಕಂಡಕ್ಟರ್ ಚೌಕಟ್ಟಿನಲ್ಲಿ ಇಂಟಿಗ್ರೇಟೆಡ್ ಸರ್ಕ್ಯೂಟ್, ಪ್ಲಾಂಟ್ ವೆರೈಟಿ ಪ್ರೊಟೆಕ್ಷನ್, ಜಿಯೋಗ್ರಾಫಿಕಲ್ ಇಕೇಶೇಶೇಶನ್ಸ್, ಟ್ರೆಡಿಷನಲ್ ನಾಲೆಜ್ ಆ್ಯಂಡ್ ಟ್ರೇಡ್ ಸೀಕ್ರೆಟ್ಸ್ ಬಗ್ಗೆ ವಿವರಿಸಿದರು.

ಸಂಭಾವ್ಯ ಇನ್ವೆಂಟರ್ಸ್ ಮತ್ತು ಉದ್ಯಮಿಗಳಿಗೆ ಈ ಉಪಕರಣಗಳ ಪ್ರಯೋಜನಗಳನ್ನು ತಿಳಿಸಿದರು. ಈ ಉಪಕರಣಗಳನ್ನು ತಮ್ಮ ವ್ಯವಹಾರ ಮತ್ತು ಸಂಶೋಧನೆಯಲ್ಲಿ ಪರಿಣಾಮಕಾರಿಯಾಗಿ ಹೇಗೆ ನಿಯಂತ್ರಿಸಬೇಕೆಂದು ಚರ್ಚಿಸಿದರು. ಇವರು ಒಬ್ಬರ ಐಪಿಗಾಗಿ ಐಪಿ ರಕ್ಷಣೆ ಮತ್ತು ಗೌರವದ ಮಹತ್ವವನ್ನು ಬಗ್ಗೆ ಮಾಹಿತಿ ನೀಡಿದರು.

ಎರಡನೆಯ ಅಧಿವೇಶನದಲ್ಲಿ ಮೋಹನ್ ಎಸ್. ಉಪನ್ಯಾಸ ನೀಡಿದರು. ಸಹ್ಯಾದ್ರಿ ಕಾಲೇಜಿನ ಆರ್‌ಡಿ ನಿರ್ದೇಶಕ ಡಾ.ಮಂಜಪ್ಪ ಸಾರಥಿ, ಸಹ್ಯಾದ್ರಿಯಲ್ಲಿನ ಇಂಟೆಲೆಕ್ಚುಯಲ್ ಪ್ರಾಪರ್ಟಿ ಸೆಂಟರಿನ ಪ್ರಯೋಜನಗಳನ್ನು ವಿವರಿಸಿದರು. ಡಾ.ಫರಾಹ್ ದೀಬಾ, ಸೀನಿಯರ್ ಐಪಿ ಸ್ಪೆಷಲಿಸ್ಟ್ ಮತ್ತು ಮೊನ್ಸಾಂಟೊದ ಮಾಜಿ ಪ್ರಧಾನ ವಿಜ್ಞಾನಿ ಮಧ್ಯಾಹ್ನ ಅಧಿವೇಶನ ಬೌದ್ಧಿಕ ಆಸ್ತಿ ಮತ್ತು ತಂತ್ರಜ್ಞಾನನ್ನು ಪ್ರಾರಂಭಿಸಿದರು.

ತಾಂತ್ರಿಕ ಅಧಿವೇಶನದಲ್ಲಿ ಹಿರಿಯ ಐಪಿ ಸ್ಪೆಷಲಿಸ್ಟ್ ಡಾ.ಅರವಿಂದ್ ವಿಶ್ವನಾಥನ್, ಪೇಟೆಂಟ್ ಸಬ್ಜೆಕ್ಟ್ ಮತ್ತು ಸರ್ಚ್‌ನಲ್ಲಿ ಪೇಟೆಂಟ್ ಫೈಲಿಂಗ್ ಕಾರ್ಯ ವಿಧಾನಗಳು ಮತ್ತು ಅದರಲ್ಲಿ ಒಳಗೊಂಡಿರುವ ಕಾರ್ಯವಿಧಾನಗಳ ಮುನ್ನೋಟ ಮುಂತಾದ ಪೇಟೆಂಟ್ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದರು.
 ಪೇಟೆಂಟ್ ಹುಡುಕಾಟದ ಪರಿಕಲ್ಪನೆಗಳು, ಪೇಟೆಂಟ್ ಸಿಸ್ಟಂನ ಮುಖ್ಯ ಚರ್ಚೆಗೆ ಈ ಅಧಿವೇಶನವು ಭಾಗವಾಯಿತು. ಕೊನೆಯಲ್ಲಿ ತಾಂತ್ರಿಕ ಅಧಿವೇಶನ ಹಾಗೂ ಮುಕ್ತ ಸಂವಾದ ನಡೆದು ಸಮಾರಂಭ ಮುಕ್ತಾಯವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News