×
Ad

ಗಂಜಿಮಠ ಸಮೀರ್ ಕೊಲೆ ಪ್ರಕರಣ: ಪತ್ನಿ ಫಿರ್ದೌಸ್, ಪ್ರಿಯಕರನಿಗೆ ನ್ಯಾಯಾಂಗ ಬಂಧನ

Update: 2018-10-07 20:45 IST
ಆಸಿಫ್ - ಫಿರ್ದೌಸ್

ಮಂಗಳೂರು, ಅ.7: ಗಂಜಿಮಠ ಸಮೀಪದ ಮುಹಮ್ಮದ್ ಸಮೀರ್(35) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್‌ ಪತ್ನಿ ಫಿರ್ದೌಸ್ ಮತ್ತಾಕೆಯ ಪ್ರಿಯಕರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ದೇವತಾನಪಟ್ಟಿ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಸುಕುಮಾರ್ ಖಚಿತಪಡಿಸಿದ್ದಾರೆ.

ಆರೋಪಿಗಳನ್ನು ಬೆಂಗಳೂರು-ತಮಿಳುನಾಡು ಗಡಿ ಪ್ರದೇಶವಾದ ಹೊಸೂರು ಠಾಣೆ ವ್ಯಾಪ್ತಿಯ ಹೊಸೂರು ಬಸ್ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು.

ವಿಚಾರಣೆ ವೇಳೆ ಬಾಯ್ಬಿಟ್ಟ ಆರೋಪಿಗಳು, ಸಮೀರ್‌ನನ್ನು ಸೆ.15ರಂದು ರಾತ್ರಿ 11 ಗಂಟೆಯ ಸುಮಾರಿಗೆ ಚಾಕುವಿನಿಂದ ತಿವಿದು ಕೊಲೆಗೈಯಲಾಗಿದೆ. ಬಳಿಕ ಮೃತದೇಹವನ್ನು ಕೊಡೈಕೆನಾಲ್‌ನಲ್ಲಿ ಬಿಸಾಡಿದ ಬಗ್ಗೆ ಒಪ್ಪಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.

ಫಿರ್ದೌಸ್, ಮತ್ತಾಕೆಯ ಪ್ರಿಯಕರ ಆಸಿಫ್ ನನ್ನು ವಶಕ್ಕೆ ಪಡೆದ ಹೊಸೂರು ಠಾಣೆಯ ಪೊಲೀಸರು ಗೌಪ್ಯ ಸ್ಥಳಕ್ಕೆ ವಿಚಾರಣೆಗಾಗಿ ಕರೆದೊಯ್ದಿದ್ದು, ಬಳಿಕ ಸಮೀರ್ ಮೃತದೇಹ ಪತ್ತೆಯಾಗಿದ್ದ ದೇವತಾನಪಟ್ಟಿ ಠಾಣೆಗೆ ಕರೆದೊಯ್ದು ಮತ್ತೊಂದು ವಿಚಾರಣೆ ಬಳಿಕ ನ್ಯಾಯಾಂಗದ ವಶಕ್ಕೆ ನೀಡಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸೆ.13ರಂದು ಮುಹಮ್ಮದ್ ಸಮೀರ್ ತನ್ನ ಪತ್ನಿ ಫಿರ್ದೌಸ್ ಮತ್ತು 3 ತಿಂಗಳ ಹೆಣ್ಣು ಮಗುವಿನೊಂದಿಗೆ ತನ್ನ ಮನೆಯಿಂದ ಬೆಂಗಳೂರಿಗೆ ವಿಮಾನದ ಮೂಲಕ ತೆರಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News