ಕಸಾಯಿಖಾನೆಗೆ ಅನುದಾನ ನೀಡಿರುವುದು ಕೇಂದ್ರ ಸರಕಾರ: ಐವನ್
Update: 2018-10-07 22:14 IST
ಉಡುಪಿ, ಅ.7: ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿ ಕಸಾಯಿ ಖಾನೆಗೆ ಕೇಂದ್ರ ಸರಕಾರ ಅನುದಾನ ಮಂಜೂರು ಮಾಡಿಗಿದೆ. ಈ ಕುರಿತು ಯೋಜನೆಯ ನಿರ್ದೇಶಕರಾಗಿರುವ ಸಂಸದ ನಳಿನ ಕುಮಾರ್ ಕಟೀಲು ಉತ್ತರಿಸಬೇಕಾಗಿದೆ ಎಂದು ವಿಧಾನ ಪರಿಷತ್ ಸಸ್ಯ ಐವನ್ ಡಿಸೋಜ ಒತ್ತಾಯಿಸಿದ್ದಾರೆ.
ಬೆಳ್ಮಣ್‌ನಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಎಂಬುದು ಡೋಂಗಿ ಪರಿಕಲ್ಪನೆಯಾಗಿದೆ. ಇದರಿಂದ ಯಾವುದೇ ಅಭಿವೃದ್ಧಿಯಾಗುವುದಿಲ್ಲ. ಜನರಿಗೆ ಮೋಸ ಮಾಡುವುದು ಕೇಂದ್ರ ಸರಕಾರದ ಉದ್ದೇಶವಾಗಿದೆ ಎಂದು ಆರೋಪಿಸಿದರು.