×
Ad

​ಕಸಾಯಿಖಾನೆಗೆ ಹಣ ಬಳಸಲು ಬಿಡಲ್ಲ: ಸುನೀಲ್ ಕುಮಾರ್

Update: 2018-10-07 22:15 IST

ಉಡುಪಿ, ಅ.7: ಸ್ಮಾರ್ಟ್ ಸಿಟಿ ಯೋಜನೆಯ ಅನುದಾನವನ್ನು ಕಸಾಯಿ ಖಾನೆಗೆ ಬಳಸುವ ದೊಡ್ಡ ಹುನ್ನಾರ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಕೇಂದ್ರ ಸರಕಾರದ 15 ಕೋಟಿ ರೂ. ಕಸಾಯಿಖಾನೆಗೆ ಬಳಕೆ ಮಾಡಲು ಬಿಡುವುದಿಲ್ಲ. ಇದರ ವಿರುದ್ಧ ಮೂರು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗು ವುದು ಎಂದು ವಿಧಾನಸಭೆ ವಿಪಕ್ಷ ಮುಖ್ಯಸಚೇತಕ ಸುನೀಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಬೆಳ್ಮಣ್‌ನಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರಕಾರದ ಹಣ ಅಭಿವೃದ್ಧಿಗೆ ಬಳಕೆಯಾಗಬೇಕು. ಆದರೆ ಸಚಿವ ಯು.ಟಿ. ಖಾದರ್‌ಗೆ ಕಸಾಯಿಖಾನೆಗಳ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದಾರೆ. ಹೀಗಾಗಿ ಕಸಾಯಿಖಾನೆ ಮುಚ್ಚಲು ಸರಕಾರಕ್ಕೆ ಆಸಕ್ತಿ ಇಲ್ಲ. ಅಕ್ರಮ ಗೋವು ಸಾಗಾಟ ತಡೆಯುತ್ತಿಲ್ಲ. ರಾಜ್ಯದ ಜನತೆ ಸುಂದರ ನಗರವನ್ನು ಬಯಸುತ್ತಾರೆ ಎಂಬು ದನ್ನು ಕಾಂಗ್ರೆಸ್ ತಿಳಿದುಕೊಳ್ಳಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News