ಬಸ್ಸಿನಿಂದ ಬಿದ್ದು ಮೃತ್ಯು
Update: 2018-10-07 22:18 IST
ಕಾರ್ಕಳ, ಅ.8: ಹೊಸ್ಮಾರಿನ ಅರಣ್ಯ ಕಛೇರಿಯ ಮುಂಭಾಗದಲ್ಲಿ ಬಸ್ಸಿನಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಅ.6ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಮೂಡಬಿದ್ರೆಯ ಮಾಂಟ್ರಾಡಿ ಗ್ರಾಮದ ಪೆಂಚಾರು ನಿವಾಸಿ ಸೋಜಾನ್ (43) ಎಂದು ಗುರುತಿಸಲಾಗಿದೆ.
ಇವರು ಅಳಿಯೂರಿನಿಂದ ಹೊಸ್ಮಾರ್‌ಗೆ ಬಸ್‌ನಲ್ಲಿ ಮುಂಭಾಗದ ಬಾಗಿಲಿನ ಬಳಿಯ ಸೀಟಿನಲ್ಲಿ ಕುಳಿತು ಹೋಗುತ್ತಿದ್ದರೆನ್ನಲಾಗಿದೆ. ಆಗ ಚಾಲಕ ಒಮ್ಮೇಲೆ ಬ್ರೇಕ್ ಹಾಕಿದಾಗ ಸೋಜಾನ್ ಎದುರು ಬಾಗಿಲಿನಿಂದ ಹೊರ ಬಿದ್ದು ಬಸ್ಸಿನ ಹಿಂಬದಿಯ ಚಕ್ರದ ಅಡಿಗೆ ಸಿಲುಕಿ ಮೃತಪಟ್ಟರೆಂದು ತಿಳಿದುಹಬಂದಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.