ಉಡುಪಿ- ಸಂತೆಕಟ್ಟೆಯಿಂದ ಹೃದಯಕ್ಕಾಗಿ ನಡಿಗೆ
Update: 2018-10-07 22:51 IST
ಉಡುಪಿ, ಅ.7: ರೋಟರಿ ಕ್ಲಬ್ ಕಲ್ಯಾಣಪುರ ಹಾಗೂ ಉಡುಪಿ ಧನ್ವಂತರಿ ಶಾಲೆಯ ಆಡಳಿತ ಮಂಡಳಿ ಜಂಟಿ ಆಶ್ರಯದಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಹೃದಯಕ್ಕಾಗಿ ನಡಿಗೆಯನ್ನು ರವಿವಾರ ಆಯೋಜಿಸಲಾಗಿತ್ತು.
ನಡಿಗೆಗೆ ಉಡುಪಿ ಹೈಟೆಕ್ ಆಸ್ಪತ್ರೆಯ ಎದುರು ಸುಬ್ಬಣ್ಣ ಪೈ ಚಾಲನೆ ನೀಡಿದರು. ಅಲ್ಲಿಂದ ಆರಂಭಗೊಂಡ ನಡಿಗೆ ಸಂತೆಕಟ್ಟೆಯಲ್ಲಿ ಸಮಾಪನ ಗೊಂಡಿತು. ಕಲ್ಯಾಣಪುರ ರೋಟರಿ ಅಧ್ಯಕ್ಷ ಬ್ರಾನ್ ಡಿಸೋಜ ಹಾಜರಿದ್ದರು. ಇದರಲ್ಲಿ ಸುಮಾರು 250 ಮಂದಿ ಭಾಗವಹಿಸಿದ್ದರು.