×
Ad

ಮಂಗಳೂರು: ಪಿಎಫ್‌ಐ, ಮುಹಿಯುದ್ದೀನ್ ಜುಮ್ಮಾ ಮಸೀದಿಯಿಂದ ರಕ್ತದಾನ ಶಿಬಿರ

Update: 2018-10-08 18:26 IST

ಮಂಗಳೂರು, ಅ.8: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಚಾರ್ಮಾಡಿ ವಲಯ, ಮುಹಿಯುದ್ದೀನ್ ಜುಮ್ಮಾ ಮಸೀದಿ ಜಲಾಲಿಯ ನಗರ ಚಾರ್ಮಾಡಿ ಹಾಗೂ ಎ.ಜೆ. ಆಸ್ಪತ್ರೆಗಳ ಜಂಟಿ ಆಶ್ರಯದಲ್ಲಿ ರವಿವಾರ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಪಿಎಫ್‌ಐನ ಬೆಳ್ತಂಗಡಿ ವಲಯ ಕಾರ್ಯದರ್ಶಿ ಮುಸ್ತಫಾ ಜಿ.ಕೆರೆ ಉದ್ಘಾಟಿಸಿದರು. ಮುಖ್ಯಅತಿಥಿಗಳಾಗಿ ಡಾ.ಗುರುಪ್ರಸಾದ್ ರಾವ್, ಗಂಡಿಗಬಾಗಿಲು ಸಿಯೋನ್ ಆಶ್ರಮದ ನಿರ್ದೇಶಕ ಯು.ಸಿ. ಪೌಲೋಸ್ ಭಾಗವಹಿಸಿದ್ದರು. ಶಿಬಿರದಲ್ಲಿ ಯು.ಸಿ. ಪೌಲೋಸ್ ಅವರನ್ನು ಸನ್ಮಾನಿಸಲಾಯಿತು. 

ಕಾರ್ಯಕ್ರಮದಲ್ಲಿ ಚಾರ್ಮಾಡಿ ಗ್ರಾಪಂನ ಪಿಡಿಒ ಪ್ರಕಾಶ್ ಶೆಟ್ಟಿ, ಪಿಎಫ್‌ಐ ಉಜಿರೆ ವಲಯ ಅಧ್ಯಕ್ಷ ಶರೀಫ್, ವೈಎಂಎ ಚಾರ್ಮಾಡಿ ಅಧ್ಯಕ್ಷ ಅಬುಸಾಲಿ, ಎಂಜೆಎಂ ಮಾಜಿ ಅಧ್ಯಕ್ಷ ಅಬ್ದುಲ್ ಮಜೀದ್, ಎಸ್‌ಡಿಪಿಐ ದ.ಕ. ಜಿಲ್ಲಾ ಸಮಿತಿಯ ಸದಸ್ಯ ಅಕ್ಬರ್ ಬೆಳ್ತಂಗಡಿ, ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ನವಾಝ್ ಕಟ್ಟೆ, ಚಾರ್ಮಾಡಿ ಗ್ರಾಪಂ ಸದಸ್ಯ ಸಿದ್ದೀಕ್ ಯು.ಪಿ., ಸಿದ್ದೀಕ್ ಸೌದಿ ಅರೇಬಿಯಾ, ಎಸ್‌ಡಿಪಿಐ ಚಾರ್ಮಾಡಿ ವಲಯದ ಅಧ್ಯಕ್ಷ ರಹೀಂ, ಪಿಎಫ್‌ಐ ಚಾರ್ಮಾಡಿ ವಲಯದ ಅಧ್ಯಕ್ಷ ಫಾರೂಕ್ ಮತ್ತಿತರರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಸ್ತಫಾ ಡಿ.ಕೆ. ದುವಾಗೈದರು. ಪಿಎಫ್‌ಐ ಉಜಿರೆ ವಲಯ ಅಧ್ಯಕ್ಷ ಶರೀಫ್ ಸ್ವಾಗತಿಸಿದರು. ಶಿಬಿರದಲ್ಲಿ ಸುಮಾರು 75 ಯುನಿಟ್ ರಕ್ತವನ್ನು ರಕ್ತದಾನಿಗಳಿಂದ ಸಂಗ್ರಹಿಸಲಾಯಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News