ಬ್ಯಾಂಕಾಕ್ ನಲ್ಲಿ ಗ್ಯಾಂಗ್ ಗಳ ನಡುವೆ ಗುಂಡಿನ ಕಾಳಗ: ಭಾರತೀಯ ಸೇರಿ ಇಬ್ಬರು ಮೃತ್ಯು

Update: 2018-10-08 13:03 GMT

ಬ್ಯಾಂಕಾಕ್, ಅ.8: ಎರಡು ಗ್ಯಾಂಗ್ ಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಭಾರತೀಯ ಪ್ರವಾಸಿಗ ಸೇರಿದಂತೆ ಇಬ್ಬರು ಮೃತಪಟ್ಟಿದ್ದು, ಇಬ್ಬರು ಭಾರತೀಯರು ಸೇರಿ ಐವರು ಗಾಯಗೊಂಡಿದ್ದಾರೆ. ಬ್ಯಾಂಕಾಕ್ ನಲ್ಲಿ ಈ ಘಟನೆ ನಡೆದಿದೆ.

ಇಲ್ಲಿನ ಸೆಂಟರಾ ವಾಟರ್ ಗೇಟ್ ಪೆವಿಲಿಯನ್ ಹೊಟೇಲ್ ಹಿಂಬಾಗದ ಬೀದಿಯೊಂದರಲ್ಲಿ ಶೂಟೌಟ್ ನಡೆದಿತ್ತು. ಭಾರತ ಮೂಲದ ಪ್ರವಾಸಿಗ ಧೀರಜ್ ಎಂಬವರು ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಾಯಾಳುಗಳಲ್ಲಿ ಇಬ್ಬರು ಭಾರತೀಯರು ಮತ್ತು ಇಬ್ಬರು ಥಾಯ್ ಪ್ರಜೆಗಳು ಸೇರಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News