ಲೈಂಗಿಕ ಕಿರುಕುಳ ವಿರೋಧಿಸಿದ ಶಾಲಾ ಬಾಲಕಿಯರಿಗೆ ಥಳಿತ: 9 ಮಂದಿಯ ಬಂಧನ
Update: 2018-10-08 19:54 IST
ಪಾಟ್ನಾ, ಅ. 8: ಬಿಹಾರದ 40 ಶಾಲಾ ಬಾಲಕಿಯರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಅಪ್ರಾಪ್ತ ವಯಸ್ಕರು ಸೇರಿದಂತೆ ಇದುವರೆಗೆ 9 ಮಂದಿಯನ್ನು ಬಂಧಿಸಲಾಗಿದೆ. ಬಿಹಾರದ ಸಾಪೌಲ್ ಜಿಲ್ಲೆಯಲ್ಲಿ ಸ್ಥಳೀಯ ಯುವಕರ ಲೈಂಗಿಕ ಕಿರುಕುಳದ ವಿರುದ್ಧ ಪ್ರತಿಭಟನೆ ನಡೆಸಿದ ಬಾಲಕಿಯರನ್ನು ಸ್ಥಳೀಯ ಗ್ರಾಮ ನಿವಾಸಿಗಳು ಥಳಿಸಿದ್ದರು.
ಗ್ರಾಮದ ಸಮೀಪದ ಕೆಲವು ಯುವಕರು ಬಾಲಕಿಯರ ಬಗ್ಗೆ ಶಾಲೆಯ ಗೋಡೆಗಳಲ್ಲಿ ಅಶ್ಲೀಲ ಸಂದೇಶಗಳನ್ನು ಬರೆದಿದ್ದರು. ಯುವಕರ ಕಿರುಕುಗಳದ ಬಗ್ಗೆ ಬಾಲಕಿಯರು ಧ್ವನಿ ಎತ್ತಲು ಪ್ರಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬಾಲಕಿಯರಿಗೆ ಥಳಿಸಿದ್ದರು. ಶನಿವಾರ ಶಾಲೆಯಲ್ಲಿ ಆಟವಾಡುತ್ತಿದ್ದ ಬಾಲಕಿಯರಿಗೆ ಗ್ರಾಮಸ್ತರು ಥಳಿಸಿದ್ದಾರೆ. ಯುವಕರಿಂದ ದಿನನಿತ್ಯ ಕಿರುಕುಳ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಬಾಲಕಿಯರು ಪ್ರತಿಭಟನೆ ನಡೆಸಿರುವುದರಿಂದ ಗ್ರಾಮಸ್ಥರು ಆಕ್ರೋಶಿತರಾಗಿ ಥಳಿಸಿದ್ದರು ಎನ್ನಲಾಗಿದೆ.