×
Ad

ತನುಶ್ರೀ ದತ್ತಾಗೆ ಲೈಂಗಿಕ ಶೋಷಣೆ ನಡೆದಿಲ್ಲ, ಪ್ರಚಾರಕ್ಕಾಗಿ ಆರೋಪ: ಚಿತ್ರ ನಿರ್ಮಾಪಕ

Update: 2018-10-08 19:57 IST

ಹೊಸದಿಲ್ಲಿ, ಅ.8: ನಟಿ ತನುಶ್ರೀ ದತ್ತಾ ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ಧ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪ ಕೇವಲ ಪ್ರಚಾರ ತಂತ್ರ. ಆಕೆಯ ಮೇಲೆ ಯಾವುದೇ ಲೈಂಗಿಕ ಶೋಷಣೆ ನಡೆದಿಲ್ಲ ಎಂದು ಚಿತ್ರ ನಿರ್ಮಾಪಕ ಸಮಿ ಸಿದ್ದಿಕಿ ತಿಳಿಸಿದ್ದಾರೆ.

ಈ ಬಗ್ಗೆ ಮುಂಬೈಯ ಓಶಿವರ ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ, ದತ್ತಾ ಮೇಲೆ ಲೈಂಗಿಕ ಶೋಷಣೆ ನಡೆದಿಲ್ಲ. ಆಕೆ ಪ್ರಚಾರಕ್ಕಾಗಿ ಇದನ್ನು ಮಾಡುತ್ತಿದ್ದಾರೆ ಎಂದು ಸಿದ್ದಿಕಿ ಆರೋಪಿಸಿದ್ದಾರೆ. 2008ರಲ್ಲಿ ‘ಹಾರ್ನ್ ಓಕೆ ಪ್ಲೀಸ್’ ಸಿನೆಮಾದ ಚಿತ್ರೀಕರಣದ ವೇಳೆ ನಾನಾ ಪಾಟೇಕರ್ ತನ್ನನ್ನು ಲೈಂಗಿಕ ಶೋಷಣೆಗೆ ಗುರಿಯಾಗಿಸಿದ್ದರು ಎಂದು ದತ್ತಾ ಆರೋಪಿಸಿದ್ದರು. ಈ ಕುರಿತು ಆಕೆ ಶನಿವಾರ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪಾಟೇಕರ್ ಜೊತೆಗೆ ದತ್ತಾ ನಾಟ್ಯ ನಿರ್ದೇಶಕ ಗಣೇಶ್ ಆಚಾರ್ಯ ಹೆಸರನ್ನೂ ಉಲ್ಲೇಖಿಸಿದ್ದರು.

ತನ್ನ ವಿರುದ್ಧದ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿರುವ ನಾನಾ ಪಾಟೇಕರ್ ಆರೋಪವನ್ನು ಹಿಂಪಡೆದು ಕ್ರಮೆ ಕೇಳುವಂತೆ ತನುಶ್ರೀ ದತ್ತಾಗೆ ಕಾನೂನು ನೋಟಿಸ್ ಕಳುಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News