ಮಕ್ಕಳ ಮೇಲೆ ಲೈಂಗಿಕ ಕಿರುಕುಳ: ವಯಸ್ಸಿನ ಮಿತಿ ನಿಗದಿಗೊಳಿಸದಂತೆ ಸಚಿವಾಲಯಕ್ಕೆ ಮೇನಕಾ ಗಾಂಧಿ ಪತ್ರ

Update: 2018-10-08 14:31 GMT

ಹೊಸದಿಲ್ಲಿ, ಅ. 9: ಮಕ್ಕಳ ಮೇಲಿನ ಲೈಂಗಿಕ ಕಿರುಕುಳದ ವಿರುದ್ಧ ದೂರು ನೀಡಲು ಯಾವುದೇ ವಯಸ್ಸಿನ ಮಿತಿ ನಿಗದಿಗೊಳಿಸದಂತೆ ಕಾನೂನು ಸಚಿವಾಲಯದಲ್ಲಿ ವಿನಂತಿಸಿದ್ದೇನೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಸೋಮವಾರ ಹೇಳಿದ್ದಾರೆ.

ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಗಳ ವರದಿಗೆ ವಯಸ್ಸಿನ ಮಿತಿ ತೆಗೆಯುವಂತೆ ಹಾಗೂ ಮಕ್ಕಳ ಮೇಲಿನ ಲೈಂಗಿಕ ಕಿರುಕುಳದ ವರದಿಗೆ ಅನ್ವಯವಾಗುವ ಸಮಯದ ಅವಧಿಯ ಕುರಿತ ಕಾನೂನಿನ ಸ್ಪಷ್ಟನೆ ಕೋರಿ ತಾನು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಪತ್ರ ಬರೆದಿರುವುದಾಗಿ ಅವರು ತಿಳಿಸಿದ್ದಾರೆ. ಸಿಆರ್‌ಪಿಸಿಯ 468ನೆ ವಿಧಿ ಅಡಿಯಲ್ಲಿನ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಸಹಿತ ಯಾವುದೇ ಅಪರಾಧಕ್ಕೆ ದೂರು ದಾಖಲಾದ ಮೂರು ವರ್ಷಗಳ ಒಳಗೆ ಮೂರು ವರ್ಷ ಕಾರಾಗೃಹ ಶಿಕ್ಷೆ ವಿಧಿಸಬಹುದಾಗಿದೆ. ಮಹಿಳೆಯ ವಿರುದ್ಧ ಲೈಂಗಿಕ ಕಿರುಕುಳ ನೀಡುವುದರ ವಿರುದ್ಧ “ಮಿಟೂ” ಅಭಿಯಾನ ಆರಂಭಿಸಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಲೈಂಗಿಕ ಕಿರುಕುಳದ ವಿರುದ್ಧ ದೂರು ನೀಡಲು ಮಹಿಳೆಯರು ಮುಂದೆ ಬರಬೇಕು ಎಂದು ಅವರು ಹೇಳಿದ್ದಾರೆ.

ಮಕ್ಕಳಿರುವಾಗ ಲೈಂಗಿಕ ಕಿರುಕುಳಕ್ಕೆ ಒಳಗಾದ ವ್ಯಕ್ತಿ 30 ವರ್ಷದ ವರೆಗೆ ದೂರು ಸಲ್ಲಿಸಲು ಅವಕಾಶ ನೀಡಬೇಕು ಎಂದು ಮೇನಕಾ ಗಾಂಧಿ ಅವರು ಇತ್ತೀಚೆಗೆ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News