×
Ad

ಮುದ್ರಾಡಿ ಅಖಿಲ ಭಾರತ ನವರಂಗೋತ್ಸವ: 9 ಮಂದಿಗೆ ಕರ್ನಾಟ ನಾಡಪೋಷಕ ಪ್ರಶಸ್ತಿ

Update: 2018-10-08 20:17 IST

ಹೆಬ್ರಿ, ಅ.8: ಮುದ್ರಾಡಿ ನಮತುಳುವೆರ್ ಕಲಾ ಸಂಘಟನೆಯ ವತಿಯಿಂದ ಅ.10ರಿಂದ ನಡೆಯುವ 18ನೇ ವರ್ಷದ ಅಖಿಲ ಭಾರತ ನವರಂಗೋತ್ಸವ ದಲ್ಲಿ ನಾಡಿನ 9 ಮಂದಿ ಸಾಧಕರನ್ನು ‘ಕರ್ನಾಟ ನಾಡಪೋಷಕ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಸುಕುಮಾರ ಮೋಹನ್ ತಿಳಿಸಿದ್ದಾರೆ.

‘ಕೋಟಿ-ಚೆನ್ನಯ’ ಧಾರವಾಹಿಯ ನಿರ್ಮಾಪಕ, ಸಮಾಜ ಸೇವಕ ಅಶೋಕ ಸುವರ್ಣ ಕಟ್ಪಾಡಿ, ಸಮಾಜ ಸೇವಕ ಮೂಲ್ಕಿ ಕೇಶವ ರಾವ್ ಸಾಂಗ್ಲಿ, ಎಲ್‌ಐಸಿಯ ಅಭಿವೃದ್ಧಿ ಅಧಿಕಾರಿ ಕಾರ್ಕಳದ ಕಿಶೋರ ಕುಮಾರ್ ಶೆಟ್ಟಿ, ಸಂಘಟಕ ಸಂಕಬೈಲು ಮಂಜುನಾಥ ಅಡಪ, ಕಲಾವಿದರಾದ ಸಮಾಜಸೇವಕ ದಿನಕರ ಹೇರೂರು, ಜನಪದ ಕಲಾವಿದ ಜೋಗಿಲ ಸಿದ್ಧರಾಜು, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸಮಾಜ ಸೇವಕ ಜಯ ಕೆ.ಶೆಟ್ಟಿ ಮತ್ತು ಸಾರಿಗೆ ಉದ್ಯಮಿ ಡಾ.ಆರೂರು ಪ್ರಸಾದ ರಾವ್ ಇವರು ಈ ಬಾರಿಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಅ.10ರಂದು ನಡೆಯುವ ಅಖಿಲ ಭಾರತ ನವರಂಗೋತ್ಸವದ ಉದ್ಘಾಟನಾ ಸಮಾರಂಭದಲ್ಲಿ 9ಮಂದಿ ಸಾಧಕರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸುಕುಮಾರ್ ಮೋಹನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News