×
Ad

ಅ. 9ರಂದು ಕೆಂಪುತಳಿ ಹೈಬ್ರಿಡ್ ಭತ್ತ ಕೃಷಿ ಕ್ಷೇತ್ರೋತ್ಸವ

Update: 2018-10-08 20:19 IST

ಉಡುಪಿ, ಅ. 8: ಉಡುಪಿ ಜಿಲ್ಲಾ ಕೃಷಿಕ ಸಂಘ ಮತ್ತು ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಅ.9ರ ಮಂಗಳವಾರ ಅಪರಾಹ್ನ 3 ಗಂಟೆಗೆ ಉಡುಪಿ ಬೈಲೂರು (ಮಿಶನ್ ಆಸ್ಪತ್ರೆ-ಕೊರಂಗ್ರಪಾಡಿ ರಸ್ತೆ) ಉಡುಪ ಕಂಪೌಂಡ್‌ನ ಜಯರಾಮ ಉಡುಪರ ಮನೆ ವಠಾರದಲ್ಲಿ ಕೆಂಪುತಳಿಯ ಹೈಬ್ರಿಡ್ ಭತ್ತದ ಕ್ಷೇತ್ರೋತ್ಸವ ನಡೆಯಲಿದೆ.

ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್ ಅಧ್ಯಕ್ಷ ಸಂತೋಷ್ ಅತ್ತಾವರ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ.ಕೆಂಪೇಗೌಡ, ಬ್ರಹ್ಮಾವರ ವಲಯ ಕೃಷಿ ಸಂಶೋಧನಾ ಕೇಂದ್ರದ ಡಾ.ಎಸ್.ಯು. ಪಾಟೀಲ, ಪ್ರಶಸ್ತಿ ವಿಜೇತ ಕೃಷಿಕ ಕುದಿ ಶ್ರೀನಿವಾಸ ಟ್, ಬಿ.ನಾರಾಯಣದಾಸ್ ಉಡುಪ, ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್‌ನ ಆರ್.ಟಿ.ಹೆಗ್ಡೆ, ಡಾ.ಕೆ.ಪಿ.ವಸಂತ್ ಶೆಟ್ಟಿ, ರಶ್ಮಿ ಅತ್ತಾವರ, ಬೆನಿಟಾ ಅತ್ತಾವರ, ಉಡುಪಿ ಹೈ-ಲೈನ್ ಏಜನ್ಸಿಯ ಆದರ್ಶ್ ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ಇಂಡೋ-ಅಮೇರಿಕನ್ ಹೈಬ್ರಿಡ್ ಸೀಡ್ಸ್‌ನ ಡಾ.ರಾಥೋ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕೃಷಿಕ ಸಂಘದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News