×
Ad

ಇರಾ-ಪರಪ್ಪುವಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಆರಂಭ

Update: 2018-10-08 20:55 IST

ಕೊಣಾಜೆ, ಅ. 8: ಬಂಟ್ವಾಳ ತಾಲೂಕು ಇರಾ ಗ್ರಾಮದ ಪರಪ್ಪು ನಾಗರಿಕರ ಬಹುಕಾಲದ ಬೇಡಿಕೆಯಾದ ಮಂಗಳೂರಿನಿಂದ ಪರಪ್ಪುವಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರದ ಉದ್ಘಾಟನಾ ಸಮಾರಂಭವು ಸೋಮವಾರ ಪರಪ್ಪು ಜಂಕ್ಷನ್‍ನಲ್ಲಿ ನಡೆಯಿತು.

ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ ಹಾಗೂ ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆಯವರು ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಬೇಡಿಕೆಯನ್ನು ಈಡೇರಿಸಿದ ಸ್ಥಳೀಯ ಶಾಸಕರೂ ರಾಜ್ಯದ ನಗರಾಭಿವೃದ್ಧಿ ವಸತಿ ಮತ್ತು ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್‍ರವರಿಗೆ ಕೃತಜ್ಞತೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಕೆ.ಎಸ್.ಆರ್.ಟಿ.ಸಿ ಡಿವಿಜನಲ್ ಟ್ರಾಫಿಕ್ ಆಫೀಸರ್ ಜೈ ಶಾಂತ್ ಕುಮಾರ್, ಡಿಪ್ಪೋ ಮ್ಯಾನೇಜರ್ ರಮ್ಯಾ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಹಾಜಿ ಇಬ್ರಾಹಿಂ ಕಟ್ಟಪುಣಿ, ಹಾಜಿ ಇಬ್ರಾಹಿಂ ಮೂಲೆ, ಹಾಜಿ ಸಿ.ಎಚ್. ಮಹಮ್ಮದ್, ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಮಸೀದಿ ಅಧ್ಯಕ್ಷರಾದ ಎಮ್.ಎಸ್. ಇಬ್ರಾಹಿಂ, ಧರ್ಮಗುರುಗಳಾದ ಅಬ್ದುಲ್ ರಝಾಕ್ ಸಖಾಫಿ, ಪ್ರಮುಖರಾದ ಪದ್ಮನಾಭ ನರಿಂಗಾಣ, ನಾಸೀರ್ ನಡುಪದವು, ವರದರಾಜ್ ಇರಾ, ಸತ್ಯಶಂಕರ್ ಭಟ್, ಶಶಿಧರ್ ಶೆಟ್ಟಿ, ಗುರುವಪ್ಪ ಪೂಜಾರಿ, ಮೊಯಿದ್ದೀನ್ ಕುಂಞ ಪರಪ್ಪು, ಅಬ್ದುಲ್ ಅಜೀಜ್, ಇಸ್ಮಾಯಿಲ್ ಪರಪ್ಪು, ಮೊಯಿದ್ದೀನ್ ಕುಂಞ ಬಾಳೆಪುಣಿ ಪಾಲ್ಗೊಂಡಿದ್ದರು. 

ಗ್ರಾಮ ಪಂಚಾಯಿತಿ ಸದಸ್ಯರಾದ ಎಮ್.ಬಿ. ಉಮ್ಮರ್ ಸ್ವಾಗತಿಸಿ, ಮೊಯಿದ್ದೀನ್ ಕುಂಞ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News