ಅ.14: ಟಿ.ಎಂ.ಪೈ ಸಭಾಂಗಣದಲ್ಲಿ ರಾಷ್ಟ್ರೀಯ ಮಟ್ಟದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತೋತ್ಸವ
ಮಂಗಳೂರು, ಅ. 8: ರಾಷ್ಟ್ರೀಯ ಮಟ್ಟದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತೋತ್ಸವ ಸರಸ್ವತಿ ವಂದನಾ ಕಾರ್ಯಕ್ರಮ ಡಾ.ಟಿ.ಎಂ.ಎ.ಪೈ ಅಂತಾರಾಷ್ಟ್ರೀಯ ಸಮ್ಮೇಳನ ಸಭಾಂಗಣದಲ್ಲಿ ಅ.14ರಂದು ಸಂಜೆ 5.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರಾದ ಎಸ್.ಬಿ.ಆಚಾರ್ಯ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಓಶಿಯನ್ ಪರ್ಲ್ ಹೊಟೇಲ್ ಸಹಯೋಗದೊಂದಿಗೆ ಮಂಗಳೂರು ಕಲಾ ಸಾಧನಾ ಮ್ಯೂಸಿಕ್ ಸ್ಕೂಲ್ ಈ ಸಂಗೀತೋತ್ಸವವನ್ನು ಆಯೋಜಿಸಿದೆ. ದೇಶ ವಿದೇಶದಲ್ಲಿ ಸಾಧನೆ ಮಾಡಿದ ಹಿಂದೂಸ್ತಾನಿ ಕ್ಷೇತ್ರದ ಖ್ಯಾತ ಯುವ ಸಾಧಕರಾದ ಎನ್.ಅಕಾಶ್ ಅವರು ಬಾನ್ಸುರಿ, ಈಶನ್ ಘೋಷ್ ಮತ್ತು ವಿಘ್ನೇಶ್ ಕಾಮತ್ ಅವರ ತಬಲಾ, ಅಂಕಿತ ಡಿಯೋಲೆ ಅವರ ಹಿಂದು ಸ್ತಾನಿ ಗಾಯನ, ಹೇಮಂತ್ ಭಾಗವತ್ ಅವರ ಹಾರ್ಮೋನಿಯಂ ಹಾಗೂ ವಿಭಾ ಶ್ರೀನಿವಾಸ ನಾಯಕ್ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಗೋಷ್ಠಿ ನಡೆಸಲಿದ್ದಾರೆ ಎಂದು ಎಸ್.ಬಿ.ಆಚಾರ್ಯ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಓಶಿಯನ್ ಪರ್ಲ್ ಪ್ರತಿನಿಧಿ ಹರೀಶ್, ವಿಭಾನಾಯಕ್ ಮೊದಲಾದವರು ಉಪಸ್ಥಿತರಿದ್ದರು.