×
Ad

ಉಳ್ಳಾಲ: ಸಹೋದ್ಯೋಗಿ ಯುವತಿಗೆ ಕಿರುಕುಳ ಆರೋಪ; ಓರ್ವ ವಶಕ್ಕೆ

Update: 2018-10-08 21:54 IST

ಉಳ್ಳಾಲ, ಅ. 8: ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕಚೇರಿ ಕೆಲಸ ನಿರ್ವಹಿಸುತ್ತಿದ್ದ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ಓರ್ವನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

ಕಾಸರಗೋಡು ಉಪ್ಪಳಗೇಟ್ ನಿವಾಸಿ ಅಬ್ದುಲ್ ಲತೀಫ್ (39)  ಬಂಧಿತ ಆರೋಪಿ.  ಕಂಪೆನಿಯೊಂದರ ನಿರ್ಮಾಣ ಹಂತದ ಕಟ್ಟಡದ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯುವತಿಗೆ ಕಂಪೆನಿಯ ಮೇಲ್ವೀಚಾರಕ ಹುದ್ದೆಯಲ್ಲಿದ್ದ ಲತೀಫ್ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಯುವತಿಯು ಉಳ್ಳಾಲ ಠಾಣೆಗೆ ದೂರು ನೀಡಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News