ಇಂಡೋನೇಶ್ಯ ಭೂಕಂಪ: ಮೃತರ ಸಂಖ್ಯೆ 1,944ಕ್ಕೆ ಏರಿಕೆ

Update: 2018-10-08 16:48 GMT

ಪಲು (ಇಂಡೋನೇಶ್ಯ), ಅ. 8: ಭೂಕಂಪ ಮತ್ತು ಸುನಾಮಿ ದಾಳಿಗೆ ಒಳಗಾದ ಇಂಡೋನೇಶ್ಯದ ನಗರ ಪಲು ಎಂಬಲ್ಲಿ 1,944 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದರು.

ಸುಲವೆಸಿ ದ್ವೀಪದ ಪಲು ನಗರದ ಹಲವು ಉಪನಗರಗಳನ್ನು ನಲುಗಿಸಿದ ಪ್ರಾಕೃತಿಕ ವಿಪತ್ತಿನಲ್ಲಿ ಮೃತಪಟ್ಟವರ ಸಂಖ್ಯೆ 1,944ನ್ನು ತಲುಪಿದೆ ಎಂದು ಸ್ಥಳೀಯ ಸೇನಾ ವಕ್ತಾರರೊಬ್ಬರು ತಿಳಿಸಿದರು.

‘‘ಈ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ. ಯಾಕೆಂದರೆ, ಮೃತದೇಹಗಳಿಗಾಗಿ ನಡೆಸುತ್ತಿರುವ ಶೋಧವನ್ನು ನಿಲ್ಲಿಸುವಂತೆ ನಮಗೆ ಸೂಚನೆ ಬಂದಿಲ್ಲ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News