ಮುಂಬೈಯಲ್ಲಿ ‘ಐ ಸಿ ಯು ನೋಡುವೆ ನಿನ್ನ’ ನಾಟಕ

Update: 2018-10-08 17:16 GMT

ಉಡುಪಿ, ಅ.8: ಉಡುಪಿಯ ಪ್ರಮುಖ ನಾಟಕ ಸಂಸ್ಥೆಗಳಲ್ಲಿ ಒಂದಾದ ರಂಗಭೂಮಿ ಉಡುಪಿಯ ಇತ್ತೀಚಿನ ನಾಟಕ ‘ಐ ಸಿ ಯು ನೋಡುವೆ ನಿನ್ನ’ ಅ.11ರಂದು ಮುಂಬೈಯಲ್ಲಿ ಪ್ರದರ್ಶನಗೊಳ್ಳಲಿದೆ.

ಕರ್ನಾಟಕ ನಾಟಕ ಅಕಾಡೆಮಿ ಆಶ್ರಯದಲ್ಲಿ ನಡೆಯುವ 3 ದಿನಗಳ ಹೊರ ರಾಜ್ಯ ರಂಗ ಉತ್ಸವಕ್ಕೆ ಈ ನಾಟಕ ಆಯ್ಕೆಯಾಗಿದೆ. ಕರ್ನಾಟಕ ನಾಟಕ ಅಕಾಡೆಮಿ ಆಶ್ರಯದಲ್ಲಿ ನಡೆಯುವ 3 ದಿನಗಳ ಹೊರ ರಾಜ್ಯ ರಂಗ ಉತ್ಸವಕ್ಕೆ ಈ ನಾಟಕ ಆಯ್ಕೆಯಾಗಿದೆ. ನಾಟಕಕಾರ ಶಶಿರಾಜ್ ಕಾವೂರು ನಾಟಕವನ್ನು ರಚಿಸಿದ್ದು, ರವಿರಾಜ್ ಎಚ್.ಪಿ. ನಾಟಕವನ್ನು ನಿರ್ದೇಶಿಸಿದ್ದಾರೆ. ಗೀತಂ ಗಿರೀಶ ಅವರ ಸಂಗೀತ ವಿದೆ. ಈ ಉತ್ಸವಕ್ಕೆ ಉಚಿತ ಪ್ರವೇಶವಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News