ಉಡುಪಿ ಆರ್‌ಜಿಪಿಆರ್‌ಎಸ್‌ನಿಂದ ರಸಪ್ರಶ್ನೆ ಸ್ಪರ್ಧೆ: ರಾಜೀವ್ ಗಾಂಧಿ ತಂಡ ಪ್ರಥಮ

Update: 2018-10-08 17:30 GMT

ಉಡುಪಿ, ಅ.8: ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಆಶ್ರಯದಲ್ಲಿ ಗಾಂದೀಜಿಯವರ 150ನೇ ಜನ್ಮದಿನ ಅಂಗವಾಗಿ ಗಾಂಧೀಜಿ ಜೀವನ-ಬದುಕಿನ ಬಗ್ಗೆ ಕಾರ್ಯಕರ್ತರಿಗೆ ಕಾಂಗ್ರೆಸ್ ಭವನದಲ್ಲಿ ಜರಗಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ಸುಧೀರ್ ಪಟ್ಲ, ಉಮೇಶ್ ಬ್ರಹ್ಮಾವರ, ವಿಜಯ ಲಕ್ಷ್ಮಿ ಕುಂದಾಪುರ ಅವರನ್ನು ಒಳಗೊಂಡ ರಾಜೀವ್ ಗಾಂಧಿ ತಂಡ ಪ್ರಥಮ ಸ್ಥಾನವನ್ನು ಗಳಿಸಿತು.

ದ್ವಿತೀಯ ಸ್ಥಾನವನ್ನು ಲೂವಿಸ್ ಲೋಬೋ, ಸರಳಾ ಕಾಂಚನ್, ರೇಖಾ ಜಿ. ಬನ್ನಂಜೆ ಅವರನ್ನೊಳಗೊಂಡ ಇಂದಿರಾ ಗಾಂಧಿ ತಂಡ, ಮೂರನೇ ಮತ್ತು ನಾಲ್ಕನೇ ಸ್ಥಾನವನ್ನು ವೆಂಕಟೇಶ್ ಸುವರ್ಣ, ಅಂಬಿಕಾ ಕುಂದಾಪುರ, ದೇವದಾಸ ನಾಯಕ್ ಅವರನ್ನೊಳಗೊಂಡ ರಾಹುಲ್ ಗಾಂಧಿ ತಂಡ ಮತ್ತು ವಿನಾಯಕ ರಾವ್ ಮರಂತೆ, ಜಯಲಕ್ಷ್ಮಿ ಶೆಟ್ಟಿ ಕಾರ್ಕಳ, ತೃಪ್ತಿ ಇವರನ್ನೊಳಗೊಂಡ ಸೋನಿಯಾ ಗಾಂಧಿ ತಂಡ ಗಳಿಸಿದೆ.

ವಿಜೇತ ತಂಡಗಳಿಗೆ ಅನುಕ್ರಮವಾಗಿ ರೂ. 3,000, ರೂ.2,000, ರೂ. ಹಾಗೂ 1,000ರೂ. ನಗದು ಬಹುಮಾನದೊಂದಿಗೆ ಪ್ರತಿಯೊಬ್ಬರಿಗೂ ಬೊಳುವಾರು ಮಹಮ್ಮದ್ ಕುಂಜ್ಞು ಅವರ ‘ಪಾಪು ಗಾಂಧಿ ಬಾಪು ಗಾಂಧಿಯಾದ ಕತೆ’ ಕಾದಂಬರಿಯನ್ನು ಬಹುಮಾನವಾಗಿ ನೀಡಲಾಯಿತು.

ಪ್ರಥಮ ಸುತ್ತಿನಲ್ಲಿ ಸುಮಾರು 200 ಸ್ಪರ್ಧಿಗಳು ಭಾಗವಹಿಸಿದ್ದು, ಇವರಿಗೆ ಲಿಖಿತ ಪ್ರಶ್ನಾ ಪತ್ರಿಕೆಯನ್ನು ಕೊಟ್ಟು ಅದರಲ್ಲಿ ಅತ್ಯಧಿಕ ಅಂಕ ಗಳಿಸಿದ 12 ಜನರನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತಂಡಗಳನ್ನು ರಚಿಸಿ ಮುಂದಿನ ಹಂತದ ಸ್ಪರ್ಧೆ ನಡೆಸಲಾಯಿತು.

ಸ್ಪರ್ಧೆಯ ಕ್ವಿಜ್ ಮಾಸ್ಟರ್ ಆಗಿ ಉದ್ಯಾವರ ನಾಗೇಶ್ ಕುಮಾರ್, ಸ್ಕೋರರ್ ಆಗಿ ವೆರೋನಿಕಾ ಕರ್ನೇಲಿಯೋ ಕಾರ್ಯ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News