ಅ.15ರಿಂದ ಮೊಬೈಲ್ ರಿಪೇರಿ ಉಚಿತ ತರಬೇತಿ

Update: 2018-10-08 17:36 GMT

ಮಂಗಳೂರು, ಅ.8: ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಸಿಂಡ್‌ಆರ್‌ಸೆಟಿ) ಮಣಿಪಾಲ ವತಿಯಿಂದ ನಿರುದ್ಯೋಗಿ ಸ್ವಉದ್ಯೋಗಾಕಾಂಕ್ಷಿಗಳಿಗಾಗಿ ಅ.15ರಿಂದ ‘ಮೊಬೈಲ್ ರಿಪೇರಿ’ ಕುರಿತಾದ ಉಚಿತ ತರಬೇತಿಯನ್ನು ಮಣಿಪಾಲದಲ್ಲಿ ಹಮ್ಮಿಕೊಳ್ಳಲಾಗಿದೆ.

ತರಬೇತಿಯ ಅವಧಿಯು 30 ದಿನಗಳದ್ದಾಗಿದೆ. ಊಟ- ವಸತಿ ಸಂಪೂರ್ಣವಾಗಿ ಉಚಿತವಾಗಿದೆ. ಸಂಬಂಧಿಸಿದ ಕ್ಷೇತ್ರದ ಬಗ್ಗೆ ವಿಸ್ತಾರವಾಗಿ ಪ್ರಾತ್ಯಕ್ಷಿಕೆ ಮೂಲಕ ತಿಳಿಸುವುದರ ಜತೆಗೆ ಉದ್ಯಮಶೀಲತೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿ ಮಾಹಿತಿ ನೀಡಲಾಗುತ್ತದೆ.

ಉಡುಪಿ, ದ.ಕ., ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ನೆಲೆಸಿರುವ 18 ರಿಂದ 45 ರೊಳಗಿನ ವಯೋಮಾನದ ನಿರುದ್ಯೋಗಿ ಯುವಕ- ಯುವತಿಯರು ಈ ತರಬೇತಿಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

ಆಸಕ್ತ ಅರ್ಹ ಅಭ್ಯರ್ಥಿಗಳು ಕೂಡಲೇ ತಮ್ಮ ಹೆಸರು, ಪೂರ್ಣವಿಳಾಸ, ಪಿನ್ ಕೋಡ್, ಸಂಪರ್ಕಕ್ಕೆ ಲಭ್ಯವಿರುವ ದೂರವಾಣಿ ಸಂಖ್ಯೆ, ವಯಸ್ಸು, ವಿದ್ಯಾರ್ಹತೆ, ಪಡೆಯಲಿಚ್ಚಿಸಿರುವ ತರಬೇತಿಯ ಹೆಸರು, ಮುಂತಾದ ಮಾಹಿತಿಯೊಂದಿಗೆ ಖಾಲಿ ಹಾಳೆಯಲ್ಲಿ ಅರ್ಜಿಯನ್ನು ಬರೆದು ದಿನಾಂಕ ಅ.13ರೊಳಗೆ ಈ ಕೆಳಗಿನ ವಿಳಾಸಕ್ಕೆ ತಲುಪುವಂತೆ ಕಳುಹಿಸಿಕೊಡಬಹುದು.

ಹೆಚ್ಚಿನ ಮಾಹಿತಿಗಾಗಿ ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ,(ಸಿಂಡ್‌ಆರ್‌ಸೆಟಿ), ಸಿಂಡಿಕೇಟ್ ಬ್ಯಾಂಕ್ ಪ್ರಧಾನ ಕಚೇರಿ ಸಂಕೀರ್ಣ, ಮಣಿಪಾಲ- 576104 ಅಥವಾ ಸಂಸ್ಥೆಯ ದೂ.ಸಂ.: 0820-2570455, 9449862665ನ್ನು ಸಂಪರ್ಕಿಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News