ಅ.10ರಿಂದ ಸಿಂಡ್ ಬ್ಯಾಂಕ್ ಸಂಸ್ಥಾಪನಾ ದಿನದ ಪಾಕ್ಷಿಕ

Update: 2018-10-09 14:40 GMT

ಮಣಿಪಾಲ, ಅ.9: ಸಿಂಡಿಕೇಟ್ ಬ್ಯಾಂಕಿನ 93ನೇ ಸಂಸ್ಥಾಪನಾ ದಿನದ ಪಾಕ್ಷಿಕವನ್ನು ಅ.10ರಿಂದ 25ರವರೆಗೆ ಆಚರಿಸಲಾಗುತ್ತದೆ ಎಂದು ಸಿಂಡಿಕೇಟ್ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಪಾಕ್ಷಿಕದ ಅವಧಿಯಲ್ಲಿ ಬ್ಯಾಂಕ್ ಸಿಬ್ಬಂದಿಗಳು ಹೊಸ ಮತ್ತು ಹಳೆಯ ಗ್ರಾಹಕರನ್ನು ಸಂಪರ್ಕಿಸಲಿದ್ದಾರೆ. ದೇಶಾದ್ಯಂತ ವ್ಯಾಪಿಸಿರುವ ಒಟ್ಟು 4000ಕ್ಕೂ ಅಧಿಕ ಶಾಖೆಗಳು, 4300ಕ್ಕೂ ಅಧಿಕ ಎಟಿಎಂಗಳೊಂದಿಗೆ 56 ಮಿಲಿಯಕ್ಕೂ ಅಧಿಕ ಗ್ರಾಹಕರನ್ನು ಹೊಂದಿರುವ ಸಿಂಡಿಕೇಟ್ ಬ್ಯಾಂಕ್ 93ರ ಹರೆಯದಲ್ಲೂ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲು ಉತ್ಸುಕವಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

ಈ ಕುರಿತು ಮಾತನಾಡಿದ ಸಿಂಡಿಕೇಟ್ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಸಿಇಓ ಮೃತ್ಯುಂಜಯ ಮಹಾಪಾತ್ರ, ಈ 15 ದಿನಗಳ ಅವಧಿಯಲ್ಲಿ ಬ್ಯಾಂಕ್ ದೇಶ ಹಾಗೂ ಗ್ರಾಹಕರಿಗೆ ತನ್ನ ಸೇವಾ ಬದ್ಧತೆಯನ್ನು ಪುನರುಚ್ಚರಿಸಿ, ಠೇವಣಿ ಹಾಗೂ ಸಾಲ ಎರಡಲ್ಲೂ ಹೊಸ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸು ವುದಾಗಿ ಭರವಸೆ ನೀಡಿದರು. ಅಲ್ಲದೇ ಬ್ಯಾಂಕಿನ ಬೆನ್ನೆಲುಬಾಗಿರುವ ಯುವ ಮತ್ತು ಉದ್ಯಮಿಗಳಿಗೆ ಇನ್ನೂ ಹೆಚ್ಚಿನ ಸೇವೆ ನೀಡುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News