ಶಿರಾಡಿ ಘಾಟ್ ಸಂಚಾರ ಸುವ್ಯವಸ್ಥೆಗೆ ಅಧಿಕಾರಿಗಳೊಂದಿಗೆ ಚರ್ಚೆ

Update: 2018-10-09 14:41 GMT

ಉಡುಪಿ, ಅ.9: ಪ್ರಾಕೃತಿಕ ವಿಕೋಪದಿಂದ ಶಿರಾಡಿ ಘಾಟಿಯಲ್ಲಿ ಉಂಟಾದ ಭೂಕುಸಿತ ವಾಹನಗಳ ಸಂಚಾರಕ್ಕೆ ಎದುರಾಗಿರುವ ಸಮಸ್ಯೆಗಳ ಕುರಿತು ವಿಧಾನಪರಿಷತ್‌ನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ವಿಧಾನಸೌಧದ ತನ್ನ ಕಚೇರಿಯಲ್ಲಿ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಾರಿಗಳ ಸಭೆ ಕರೆದು ಚರ್ಚಿಸಿದರು.

ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೃಷ್ಣ ರೆಡ್ಡಿ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಶಿರಾಡಿ ಘಾಟಿ ಯಲ್ಲಿ ತಡೆಗೋಡೆ ಕಟ್ಟಲು ಇರುವ ತಾಂತ್ರಿಕ ಅಡಚಣೆಗಳ ಕುರಿತು ವಿವರಿಸಿ ತುರ್ತು ರಿಪೇರಿಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.

ಪುನರ್ ನಿರ್ಮಾಣಕ್ಕೆ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡಲು ಒಪ್ಪಿಕೊಂಡಿದೆ ಎಂದು ವಿವರಿಸಿದ ಕೋಟ, ಎಲ್ಲೆಲ್ಲಿ ಅಪಾಯಕಾರಿ ತಿರುವುಗಳು ಕುಸಿದು ಹೋಗಿದೆಯೋ ಆ ಸ್ಥಳಗಳಲ್ಲಿ ತಡೆಗೋಡೆ ನಿರ್ಮಾಣ ಹಾಗೂ ಇನ್ನಿತರ ತುರ್ತು ಕಾಮಗಾರಿಗಳನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News