ಸವಿತಾ ಸಮಾಜಕ್ಕೆ 500 ಆರೋಗ್ಯ ಕಾರ್ಡ್ ವಿತರಣೆಗೆ ಕ್ರಮ: ಡಾ.ಎಚ್.ಎಸ್.ಬಲ್ಲಾಳ್

Update: 2018-10-09 14:43 GMT

ಉಡುಪಿ, ಅ.9: ಪ್ರಸಕ್ತ ಸಾಲಿನಲ್ಲಿ ಸವಿತಾ ಸಮಾಜದ 150 ಕುಟುಂಬ ಗಳಿಗೆ ಆರೋಗ್ಯ ಸುರಕ್ಷಾ ಕಾರ್ಡ್‌ಗಳನ್ನು ವಿತರಿಸಲಾಗಿದ್ದು, ಸಮಾಜದ ಮನವಿ ಯಂತೆ ಮುಂದಿನ ವರ್ಷ 500 ಕುಟುಂಬಗಳಿಗೆ ಆರೋಗ್ಯ ಕಾರ್ಡ್ ವಿತರಿ ಸುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ತಿಳಿಸಿದ್ದಾರೆ.

ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ(ಮಾಹೆ) ಹಾಗೂ ಉಡುಪಿ ಸವಿತಾ ಸಮಾಜದ ಸಹಯೋಗದಲ್ಲಿ ಅಂಬಲಪಾಡಿಯ ಸವಿತಾ ಸಮಾಜ ಸಮು ದಾಯ ಭವನದಲ್ಲಿ ಮಂಗಳವಾರ ಆಯೋಜಿಸಲಾದ ಆರೋಗ್ಯ ಸುರಕ್ಷಾ ಕಾರ್ಡ್‌ಗಳ ವಿತರಣಾ ಸಮಾರಂಭದ ಉದ್ಘಾಟನೆ ಹಾಗೂ ಕಾರ್ಡ್‌ಗಳ ವಿತರಣೆ ನೆರವೇರಿಸಿ ಅವರು ಮಾತನಾಡುತಿದ್ದರು.

ಮಣಿಪಾಲದ ಆರೋಗ್ಯ ಹಾಗೂ ಶಿಕ್ಷಣ ಸಂಸ್ಥೆಗಳು ಸಮಾಜ ಸೇವೆಗಾಗಿ ಕೆಲಸ ಮಾಡುತ್ತೇವೆ ಹೊರತು ಯಾವುದೇ ಹಣದ ಆಸೆಗಾಗಿ ಅಲ್ಲ. ಈ ಸೇವೆಯನ್ನು ಇನ್ನು ಕೂಡ ಮುಂದುವರೆಸಲಾಗುವುದು. ಅನಾರೋಗ್ಯಕ್ಕೆ ಒಳಗಾ ದಾಗ ಆರೋಗ್ಯ ಕಾರ್ಡ್ ನಮ್ಮ ರಕ್ಷಣೆ ಬರುವುದರಿಂದ ಪ್ರತಿಯೊಬ್ಬರಿಗೆ ಆರೋಗ್ಯ ಕಾರ್ಡ್ ಅತಿಅಗತ್ಯವಾಗಿದೆ ಎಂದರು.

ಅಧ್ಯಕ್ಷತೆಯನ್ನು ಉಡುಪಿ ಸವಿತಾ ಸಮಾಜ ವಿವಿದೋದ್ಧೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ನವೀನಚಂದ್ರ ಭಂಡಾರಿ ವಹಿಸಿದ್ದರು. ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಯು.ಸುಧಾಕರ ಸಾಲಿಯಾನ್, ಸವಿತಾ ಸಮಾಜದ ರಾಜ್ಯ ಪ್ರತಿನಿಧಿ ವಿಶ್ವನಾಥ ಭಂಡಾರಿ ನಿಂಜೂರು, ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಸತೀಶ್ ಭಂಡಾರಿ ಉಪಸ್ಥಿತರಿದ್ದರು.

ಉಡುಪಿ ಸವಿತಾ ಸಮಾಜ ವಿವಿದೋದ್ಧೇಶ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಾಶಿವ ಕುರ್ಕಾಲು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News