×
Ad

ಅ.10: ಎಸ್‌ಐಒ ವತಿಯಿಂದ ‘ಅರಿವಿನ ನಾಳೆಗಾಗಿ’ ರಾಜ್ಯ ಕಾರವಾನ

Update: 2018-10-09 21:00 IST

ಮಂಗಳೂರು, ಅ.9: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾ (ಎಸ್‌ಐಒ) ವತಿಯಿಂದ ‘ಅರಿವಿನ ನಾಳೆಗಾಗಿ’ ಎಂಬ ಧ್ಯೇಯ ವಾಕ್ಯದಡಿ ರಾಜ್ಯ ಕಾರವಾನವು ಬುಧವಾರ ನಡೆಯಲಿದೆ.

ಕಾರವಾನದ ಭಾಗವಾಗಿ ಅಂದು ಬೆಳಗ್ಗೆ 10ಕ್ಕೆ ನಗರದ ಜ್ಯೋತಿ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಜಾಥಾ ನಡೆಯಲಿದೆ. ‘ಅರಿವಿನ ನಾಳೆಗಾಗಿ’ ಕಾರವಾನವನ್ನು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಅತ್ಹರುಲ್ಲಾ ಶರೀಫ್ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಎಸ್‌ಐಒ ರಾಷ್ಟ್ರೀಯ ಕಾರ್ಯದರ್ಶಿ ಸೈಯದ್ ಅಝರುದ್ದೀನ್, ರಾಜ್ಯ ಕಾರ್ಯದರ್ಶಿ ಸೈಯದ್ ಝಾಹಿದ್ ಸಲೀಮ್, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಜಮಾಅತೆ ಇಸ್ಲಾಮಿ ಹಿಂದ್ ದ.ಕ. ಜಿಲ್ಲಾ ಸಂಚಾಲಕ ಅಮೀನ್ ಅಹ್ಸನ್, ಕಾರವಾನದ ರಾಜ್ಯ ಸಹ ಸಂಚಾಲಕ ದಾನಿಶ್ ಚೆಂಡಾಡಿ ಹಾಗೂ ಎಸ್‌ಐಒ ರಾಜ್ಯ ಸಲಹಾ ಸಮಿತಿಯ ಸದಸ್ಯ ಯಾಸೀನ್ ಕೋಡಿಬೆಂಗ್ರೆ, ಎಸ್‌ಐಒ ದ.ಕ. ಜಿಲ್ಲಾಧ್ಯಕ್ಷ ಅಹ್ಮದ್ ಮುಬೀನ್ ಬೆಂಗ್ರೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಅರಿವಿನ ನಾಳೆಗಾಗಿ ಎಂಬ ಧ್ಯೇಯದ ವಿಷಯವಾಗಿ ಸಂವೇದನಾ ತಂಡದಿಂದ ಬೀದಿನಾಟಕವು ದ.ಕ. ಜಿಲ್ಲಾಧಿಕಾರಿ ಕಚೇರಿಯ ಬಳಿ ನಡೆಯಲಿದೆ ಎಂದು ಎಸ್‌ಐಒ ಜಿಲ್ಲಾ ಘಟಕ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News