ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ: ಸಾಲಿಹಾತ್‌ಗೆ ಪ್ರಶಸ್ತಿ

Update: 2018-10-09 15:55 GMT

ಉಡುಪಿ, ಅ. 9: ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.

ಕಿರಿಯ ಪ್ರಾಥಮಿಕ ವಿಭಾಗದ ಅರೇಬಿಕ್ ಧಾರ್ಮಿಕ ಪಠಣದಲ್ಲಿ ಫೈಸಲ್ ಪ್ರಥಮ, ಉರ್ದು ನಝಮ್‌ನಲ್ಲಿ ಜೊಹರೀನ್ ಪ್ರಥಮ, ಹಿರಿಯ ಪ್ರಾಥಮಿಕ ವಿಭಾಗದ ಅರೇಬಿಕ್ ಧಾರ್ಮಿಕ ಪಠಣದಲ್ಲಿ ಹುಝೈಫ್ ದ್ವಿತೀಯ, ಕವಾಲಿ ಗಾಯನದಲ್ಲಿ ಅಫ್ತಾರುಹ ತಂಡ ತೃತೀಯ, ಪ್ರೌಢಶಾಲಾ ವಿಭಾಗದ ಘಝಲ್‌ನಲ್ಲಿ ಹಲೀಮಾ ಸೌದಾ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News