ಪರಿಸರ ರಕ್ಷಣೆ -ಪ್ಲಾಸ್ಟಿಕ್ ನಿಷೇಧ ಕುರಿತ ಬೀದಿ ನಾಟಕ

Update: 2018-10-09 15:56 GMT

ಶಿರ್ವ, ಅ.9: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳು ಕಾಲೇಜಿನ ಪರಿಸರ ಘಟಕ ಮತ್ತು ಸಮುದಾಯ ಘಟಕಗಳ ಸಹಕಾರದೊಂದಿಗೆ ‘ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾ ಮಗಳು’ ಎಂಬ ವಿಷಯದ ಕುರಿತ ಬೀದಿನಾಟಕವನ್ನು ಅ.5ರಂದು ಕಟಪಾಡಿ ಯಲ್ಲಿ ಪ್ರದರ್ಶಿಸಿದರು.

ನಾಟಕದ ಮೂಲಕ ಪರಿಸರ ಸಂರಕ್ಷಣೆಯ ಮಹತ್ವ ಮತ್ತು ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿ ಸಲಾಯಿತು. ಈ ಸಂದರ್ಭದಲ್ಲಿ ಪರಿಸರಸ್ನೇಹಿ ಕೈಚೀಲಗಳನ್ನು ಅಂಗಡಿಗಳಿಗೆ ವಿತರಿಸಲಾಯಿತು. ಪರಿಸರ ಸಂರಕ್ಷಣೆಗೋಸ್ಕಕರ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಗಿಡಗಳನ್ನು ನೆಡಲಾಯಿತು.

ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾದ ದೀಪಿಕಾ ಬಿ.ವಿ., ಸುನಿಲ್ ಹಲ್ದನ್ಕರ್ ಸಹಕರಿಸಿದರು. 65ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾಲೇಜಿನ ಪರಿಸರ ಘಟಕ ಮತ್ತು ಸಮುದಾಯ ಘಟಕಗಳ ಸದಸ್ಯರಾದ ನಾರಾಯಣ್ ನಾಯಕ್, ರಮ್ಯ ಶೆಟ್ಟಿ, ಸೌಮ್ಯ ಭಟ್, ವೃಂದ ಅಡ್ಕರ್, ಶರತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News