ಶಬರಿಮಲೆ: ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ಆದೇಶ ಮರುಪರಿಶೀಲನೆ ಅಗತ್ಯ- ಎಂ.ಬಿ.ಪುರಾಣಿಕ್‌

Update: 2018-10-09 16:34 GMT

ಮಂಗಳೂರು, ಅ. 9: ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶ ನೀಡುವ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಮರುಪರಿಶೀಲನೆ ಮಾಡಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ವಿಶ್ವ ಹಿಂದು ಪರಿಷತ್ ಪ್ರಾಂತೀಯ ಸಮಿತಿಯ ಸಂಚಾಲಕ ಎಂ.ಬಿ.ಪುರಾಣಿಕ್ ತಿಳಿಸಿದ್ದಾರೆ.

ನಗರದ ಕದ್ರಿ ಮೈದಾನದಲ್ಲಿ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡ ಸಾರ್ವಜನಿಕ ಪ್ರತಿಭಟನಾ ಸಭೆಯನ್ನುದ್ಧೇಶಿಸಿ ಮಾತನಾಡುತ್ತಿದ್ದರು.

ಶಬರಿ ಮಲೆಯ ಪಾವಿತ್ರದ ವಿಚಾರದಲ್ಲಿ ಈ ಹಿಂದೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶದ ಅವಕಾಶವಿರಲಿಲ್ಲ. ಈ ನಂಬಿಕೆ ಆಚರಣೆ ಮುಂದೆಯೂ ಇರಬೇಕಾಗಿದೆ. ಇದನ್ನು ನ್ಯಾಯಾಲಯ ಮತ್ತು ಸರಕಾರ ಮಾನ್ಯ ಮಾಡಬೇಕು ಜನರ ಧಾರ್ಮಿಕ ನಂಬಿಕೆಗೆ ತೊಂದರೆಯಾಗದಂತೆ ಕೇರಳ ರಾಜ್ಯ ಸರಕಾರ ವರ್ತಿಸಬೇಕು. ಶಬರಿ ಮಲೆ ಕ್ಷೇತ್ರದ ಪರಂಪರೆ ಪಾವಿತ್ರತೆಯನ್ನು ಉಳಿಸಲು ಕೇರಳ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಂ.ಬಿ.ಪುರಾಣಿಕ್ ಆಗ್ರಹಿಸಿದರು. ಪತಿಭಟನಾ ಸಭೆಯಲ್ಲಿ ವಿ.ಹಿಂ.ಪರಿಷತ್ ಮುಖಂಡ ಜಗದೀಶ್ ಶೇಣವ, ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News