ಖ್ಯಾತ ಮಲಯಾಳಂ ಕವಿ ಪಾಲೂರ್ ಇನ್ನಿಲ್ಲ

Update: 2018-10-09 16:54 GMT

ಕಲ್ಲಿಕೋಟೆ, ಅ.9: ಮಲಯಾಳಂನ ಖ್ಯಾತ ಕವಿ ಎಂ.ಎನ್.ಪಾಲೂರ್ ಅವರು ಮಂಗಳವಾರ ಕೊವೂರ್‌ನಲ್ಲಿರುವ ತನ್ನ ನಿವಾಸದಲ್ಲಿ ನಿಧನರಾಗಿದ್ದಾರೆ. 89 ವರ್ಷ ವಯಸ್ಸಿನ ಪಾಲೂರ್ ವೃದ್ಧಾಪ್ಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಕುಟುಂಬ ಮೂಲಗಳು ತಿಳಿಸಿವೆ.

ಮಲಯಾಳಂನಲ್ಲಿ ಆಧುನಿಕ ಚಿಂತನೆಯ ಆದ್ಯ ಕವಿಗಳಲ್ಲಿ ಒಬ್ಬರೆನಿಸಿರುವ ಪಾಲೂರ್, 20ನೇ ಶತಮಾನದ ಕೊನೆಯಲ್ಲಿ ಕೆಲವು ಅತ್ಯುತ್ಕೃಷ್ಟವಾದ ಮಲಯಾಳಿ ಕವನಗಳನ್ನು ಬರೆದಿದ್ದರು. ತೀವ್ರವಾಗಿ ನಗರೀಕರಣಗೊಂಡ ವ್ಯವಸ್ಥೆಯಲ್ಲಿ ಮನುಕುಲ ಅನುಭವಿಸುವ ಸಂಕೀರ್ಣ ಸಮಸ್ಯೆಗಳನ್ನು ಅವರು ತಮ್ಮ ಕವನಗಳಲ್ಲಿ ಅಭಿವ್ಯಕ್ತಗೊಳಿಸಿದ್ದರು. ಕಲಿಕ್ಕಾಲಂ, ಪೇಡಿತೊಂಡಾನ್, ತೀರ್ಥಯಾತ್ರಾ ಹಾಗೂ ಭಂಗಿಯುಂ ಅಭಂಗಿಯುಂ ಅವರ ಪ್ರಮುಖ ಕವನಸಂಗ್ರಹಗಳಾಗಿವೆ.

ತನ್ನ ಆತ್ಮಕತೆಯಾದ ‘ಕಥಇಲ್ಲಾದವಂಡೆ ಕಥ’ಗಾಗಿ ಪಾರೂರ್‌ಗೆ 2013ರಲ್ಲಿ ಸಾಹಿತ್ಯ ಅಕಾಡಮಿ ಪ್ರಶಸ್ತಿ ದೊರೆತಿತ್ತು. 1983ರಲ್ಲಿ ಅವರ ಕವನಸಂಕಲನ ಕಲಿಕ್ಕಾಲಂಗಾಗಿ, ಕೇರಳ ಸಾಹಿತ್ಯ ಅಕಾಡಮಿ ಪ್ರಶಶ್ತಿ ದೊರೆತಿತ್ತು. ಪಾರೂರ್ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News